ಮುಳ್ಳು ಕೊನೆಯಲಿ

ಮುಳ್ಳು ಕೊನೆಯಲಿ

(ರಾಗ ಫರಜು ಆದಿ ತಾಳ) ಮುಳ್ಳು ಕೊನೆಯಲಿ ಮೂರು ಕೆರೆಯ ಕಟ್ಟಿ ಎರಡು ತುಂಬದು ಒಂದು ತುಂಬಲಿಲ್ಲ ||೧| ತುಂಬಲಿಲ್ಲದ ಕೆರೆಗೆ ಬಂದರು ಮೂವರೊಡ್ಡರು ಇಬ್ಬರು ಕುಂಟರು ಒಬ್ಬಗೆ ಕಾಲೆ ಇಲ್ಲ ||೨|| ಕಾಲಿಲ್ಲದ ಒಡ್ಡರಿಗೆ ಕೊಟ್ಟರು ಮೂರು ಎಮ್ಮೆಗಳ ಎರಡು ಬರಡು ಒಂದಕ್ಕೆ ಕರುವೆ ಇಲ್ಲ ||೩|| ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರು ಹೊನ್ನುಗಳ ಎರಡು ಸವಕಲು ಒಂದು ಚಾಲೆ ಇಲ್ಲ ||೪|| ಚಾಲದಾ ಹೊನ್ನುಗಳಿಗೆ ಬಂದರು ಮೂರು ನೋಟಗರು ಇಬ್ಬರು ಕುರುಡರು ಒಬ್ಬಗೆ ಕಣ್ಣೇ ಇಲ್ಲ ||೫|| ಕಣ್ಣಿಲ್ಲದ ನೋಟಗರಿಗೆ ಕೊಟ್ಟರು ಮೂರು ಊರುಗಳ ಎರಡು ಹಾಳು ಊರು ಒಂದಕ್ಕೆ ಒಕ್ಕಲೆ ಇಲ್ಲ ||೬|| ಒಕ್ಕಲಿಲ್ಲದ ಊರಿಗೆ ಬಂದರು ಮೂವರು ಕುಂಬಾರರು ಇಬ್ಬರು ಚೊಂಟರು ಒಬ್ಬಗೆ ಕೈಯೆ ಇಲ್ಲ ||೭|| ಕೈಯಿಲ್ಲದ ಕುಂಬಾರಾರು ಮಾಡ್ಯಾರು ಮೂರು ಮಡಕೆಗಳ ಎರಡು ಒಡಕುಗಳು ಒಂದಕ್ಕೆ ಬುಡವೆ ಇಲ್ಲ ||೮|| ಬುಡವಿಲ್ಲದ ಗಡಿಗಗೆ ಹಾಕಿದರು ಅಕ್ಕಿಗಳ ಎರಡು ಹಂಜಕ್ಕಿ ಒಂದು ಬೇಯಲಿಲ್ಲ ||೯|| ಬೇಯಲಿಲ್ಲದ ಅಕ್ಕಿಗೆ ಬಂದರು ಮೂವರು ನೆಂಟರು ಇಬ್ಬರು ಉಣ್ಣರು ಒಬ್ಬಗೆ ಹಸಿವೆ ಇಲ್ಲ ||೧೦ || ಹಸಿವಿಲ್ಲದ ನೆಂಟರಿಗೆ ಕೊಟ್ಟರು ಮೂರು ಟೊಣಪೆಗಳ ಎರಡು ತಾಕವು ಒಂದು ತಾಕಲೆ ಇಲ್ಲ ಇನ್ನು ಈ ಅರ್ಥಗಳೆಲ್ಲ ಪುರಂದರವಿಠಲ ಬಲ್ಲ ಅನ್ಯರ್ಯಾರು ತಿಳಿದವರಿಲ್ಲ ||೧೧||
ದಾಸ ಸಾಹಿತ್ಯ ಪ್ರಕಾರ
ಬರೆದವರು