ಮಾಯವಾದಿ ಗಂಡನೊಲ್ಲೆನೆ

ಮಾಯವಾದಿ ಗಂಡನೊಲ್ಲೆನೆ

(ರಾಗ ಕಾಮವರ್ಧನಿ/ಪಂತುವರಾಳಿ ಅಟತಾಳ ) ಮಾಯವಾದಿ ಗಂಡನೊಲ್ಲೆನೆ, ಅವನ ಮಾಯರಾಣಿ ಪೂಜೆ ಮಾಡಲಾರೆನಕ್ಕ ||ಪ || ಹೆಗಲ ಹಸಿಬೆಯೊಳಗಿಟ್ಟ ಮಡಿಯನುಟ್ಟು ಗಗನದಿಂದಿಳಿದ ಗಂಗೆಯ ತೀರದಿ ಅಗೆಯ ಮೃತ್ತಿಕೆಯ ಸರ್ವಾಂಗಕ್ಕೆ ಲೇಪಿಸಿ ಎ- ನಗೆ ಮೈಯ ತೊಳೆಯಲೀಸನೆ ಭ್ರಷ್ಟ ಖೋಡಿ || ನಿಷ್ಠೆಯಿಂದಲಿ ಸಾಲಿಗ್ರಾಮಶಿಲೆಯ ಸಂ- ಪುಷ್ಟದೊಳಿರಿಸಿ ಪೂಜಿಸು ಎಂದರೆ ಭ್ರಷ್ಟರು ಕೊಂಬುವ ಮದ್ಯಪಾನವ ಮಾಡಿ ಜೆಟ್ಟಿದೇವಿಯ ಪೂಜೆ ಮಾಡೆಂಬೋನಕ್ಕ || ಎಳೆ ತುಳಸಿ ಗಂಗೆ ಅರ್ಗ್ಯೋದಕದಿ ನಿ- ರ್ಮಲವಾಗಿ ಪೂಜೆಯ ಮಾಡೆಂದರೆ ಬಿಳಿ ನೀರ ಕುಡಿದು ಬತ್ತಲೆ ಬೇವು ಉಟ್ಟು ಹುಳಿ ಮೂಲಂಗೀರುಳ್ಳಿ ತಿಂಬುವನೆ ಖೋಡಿ || ಹರಿದಿನದುಪವಾಸ ಇರುಳಲಿ ಜಾಗರ ವರಭಕುತಿಯಲಿ ಆಚರಿಸೆಂದರೆ ಹುರುಳಿಗುಗ್ಗುರಿ ಮುಕ್ಕಿ ಮೇಲೆ ಮಜ್ಜಿಗೆ ಕುಡಿದು ಹಿರಿಯ ಹೆಬ್ಬುಲಿಯಂತೆ ನಿದ್ರಿಪ ಖೋಡಿ || ಸೃಷ್ಟಿಗಧಿಕನಾದ ವರದ ಶ್ರೀ ಪುರಂದರ- ವಿಟ್ಠಲನ ಭಜನೆ ಮಾಡೆಂದರೆ ಮುಷ್ಠಿ ಭಂಗಿಯ ತಿಂದು ಲಿಂಗಪೂಜೆಯ ಮಾಡಿ ಇಷ್ಟ ಸಲ್ಲಿಸುತೇನೆಂದೆಳೆಯುವ ಖೋಡಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು