ಮಾನಿಸರೊಳು ಮಾನಿಸಾ

ಮಾನಿಸರೊಳು ಮಾನಿಸಾ

(ರಾಗ ಯಮುನಾಕಲ್ಯಾಣಿ ಆದಿ ತಾಳ ) ಮಾನಿಸರೊಳು ಮಾನಿಸಾ, ಮಾನಸವಿಠಲ || ಭೀಮರಥಿಯಲೊಬ್ಬ ದಾಸ ಮುಳುಗಿ ಪೋಗೆ ಪೂಮಾಲೆ ಅಂಬರ ತೋಯದೆ ತೆಗೆದು ತಂದ || ಮಾನಸಕನ್ಯಾ ಮದುವೆಗೆ ಒಬ್ಬಳು ಆ ನಾಲಿಗೆ ಸುಳ್ಳು ಪಾಲಿಗೆ ನಡೆಸಿದ || ಆ ಹೆಣ್ಣು ನೆರೆತಿಂದ ನೋಡ ಬಂದಣ್ಣನ ತಾ ಹೊದ್ದ ಕಂಬಳಿಯೊಳು ಕಟ್ಟಿ ಹೊರಗಿಟ್ಟ || ತಾಂಬೂಲವಿತ್ತನೊಬ್ಬ ಗಂಡನುಳ್ಳವಳಿಗೆ ಪೊಂಬಟ್ಟೆಯ ಮುಂಜೆರಗ ಕೊಯಿಸಿಕೊಂದ || ಕಟ್ಟಾಭೀಮನಿಗೊಬ್ಬ ಕಿಟ್ಟಕಠಾರಿಯಂತೆ ಅಟ್ಟೆಯುರಿಯುತ ಬಂದು ಓಡಿ ಗುಡಿಯ ಪೊಕ್ಕ || ಮೈಲಾರ ಬೊಕ್ಕಗೆ ಹಿಂದು ಮುಂದಾಗಿದ್ದು ಕೈಯ ಕಂಕಣವಿತ್ತು ಸೂಳೆ ಕಾಯಿದು ಬಂದು || ಅಂದುಂಟು ಇಂದಿಲ್ಲ ಎಂದೆನ್ನಬೇಡಿರಿ ಎಂದಿಗಾದರು ಉಂಟು ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು