ಮಾಡಬಾರದೆ ಮದ್ದು

ಮಾಡಬಾರದೆ ಮದ್ದು

(ರಾಗ ಶಂಕರಾಭರಣ ಆದಿ ತಾಳ ) ಮಾಡಬಾರದೆ ಮದ್ದು ಮಾಯಾದೇವಿ, ಮಾಡಬಾರದೆ ||ಪ || ಕರಗಳಿಂದಲಿ ಹರಿಯ ಮಂದಿರದ ಕಸವ ತೆಗೆಯೋದಕ್ಕೆ ನಿರತದಲ್ಲಿ ಬೇಸರದೆ ಹರುಷ ಪುಟ್ಟೋ ಹಾಗೆ || ವಚನಗಳೆಲ್ಲ ಶಾಸ್ತ್ರಪ್ರವಚನೆಯೆಂದು ತಿಳಿದುಕೊಂಡು ಅಚಲಿತಭಕ್ತಿಯಲಿ ನಿತ್ಯ ರಚನೆ ಪುಟ್ಟೋ ಹಾಗೆ || ಶ್ರುತಿ ರಾಮಾಯಣ ಶ್ರೀ ಭಾಗವತ ಪಂಚರಾತ್ರಾಗಮದಿ ಕಥೆಗಳಲಿ ಬಹಳ ರತಿಯು ಪುಟ್ಟೋ ಹಾಗೆ || ದೇಹವು ಅನಿತ್ಯವೆಂದು ಮೋಹದಿಂದಲಿ ಪೋಷಿಸದಲೆ ಮಹೇಂದ್ರಾವರಜನ ಅಹರಹ ಭಜಿಸೋ ಹಾಗೆ || ನರರ ಸ್ತವನ ಹೇಯವೆಂದು ಅರೆಘಳಿಗೆ ಅಗಲದೆ ನರಹರಿಯ ಸ್ಮರಣೆಯನು ನಿರತ ಮಾಳ್ಪ ಹಾಗೆ || ಸಂತೆ ನೆರೆದಂತೆ ಸ್ತ್ರೀಪುತ್ರರೆಂತೆಂಬೊರು ಎಂದು ಅರಿತು ಕಂತುಪಿತನ ಚರಣ ಸ್ವಾಂತದಿ ಸ್ಮರಿಸೋ ಹಾಗೆ || ಮನೋವಾಕ್ಕಾಯಗಳಿಂದಲಿ ಸದ್ಗುಣದಿ ಪುರಂದರವಿಠಲನ ಅನುರಾಗದಿ ಪಾಡಿ ಕುಣಿದು ಕುಣಿದು ದಣಿಯೋ ಹಾಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು