ಮರೆತೆಯೇನೋ ರಂಗ

ಮರೆತೆಯೇನೋ ರಂಗ

(ರಾಗ ಮೋಹನ. ಏಕ ತಾಳ) ಮರೆತೆಯೇನೋ ರಂಗ ಮಂಗಳಾಂಗ ||ಪ|| ಕೋಲು ಕೈಯಲ್ಲಿ ಕೊಳಲು ಜೋಲು ಕಮ್ಬಳಿ ಹೆಗಲ ಮೇಲೆ ಕಲ್ಲಿನ ಚೀಲ ಕನ್ಕುಳಲಿ ಕಾಲಿಗೆ ಕಡಗವು ಪಶುಹಿಂಡು ಲಾಲಿಸುತ ಬಾಲಕರ ಮೇಳದೊಳಗಿದ್ಯಲ್ಲೊ ರಂಗ || ಕಲ್ಲುಮಣೆ ಕವಡೆ ಚನ್ನೆ ಗುಲುಗುಂಜಿ ವದವೆ ಸಾರಲು ನಿನ್ನ ಸರ್ವಾಂಗಕ್ಕೆ ಅಲ್ಲಲ್ಲಿಗಳವಟ್ಟು ನವಿಲುಗರಿದಂಡೆ ಅಲ್ಲಿ ಗೊಲ್ಲರ ಕೂಡೆ ಸಲ್ಲಾಪವಾಡುತ || ಸಿರಿದೇವಿ ಬಂದು ಸೇರಿದ್ದ ಬಳಿಕ ಲೋಕದೊಳಗೆ ಸಿರಿಯರಸನೆಂಬುವರು ಪರಮಮುಖ್ಯಪ್ರಾಣ ವಂದಿತ ಉಡುಪಿನ ನೆಲೆಯು ಶ್ರೀ- ಪುರಂದರ ವಿಠಲ ಕೃಷ್ಣ ನೀ ಮರೆತೀಯೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು