ಪ್ರಾಣನಾಥ ಪಾಲಿಸೋ

ಪ್ರಾಣನಾಥ ಪಾಲಿಸೋ

(ರಾಗ ನಾಟಕುರಂಜಿ ಆದಿ ತಾಳ) ಪ್ರಾಣನಾಥ ಪಾಲಿಸೋ ನೀ ಎನ್ನ ||ಪ|| ಜಾಣ ಲಕ್ಷ್ಮಣಗೆ ಜೀವವಿತ್ತ ಘನ್ನ ||ಅ.ಪ|| ವಾಣಿಪತಿ ಸಮನಾದವನೆ ರಾಣಿ ಭಾರತಿ ರಮಣನೆ ಅಂಜನಾದೇವಿಯ ಆತ್ಮಜನೆ ಕಂಜಾಕ್ಷ ರಾಮನ ದೂತನೆ || ಪಾಂಡುಸುತ ಭೂಮಂಡಲೇಶ ಪಾಂಡುರಂಗನ ಭಕ್ತರ ಪೋಷ ಮೂಲ ಗುರು ಮಧ್ವ ರಾಯರಾಗಿ ಮೂಲ ದೈತ್ಯರ ನೀಗಿ || ನರಹರಿ ಪುರಂದರ ವಿಠಲನ ಕೀರ್ತಿ ನರರಿಗೆ ತೋರಿದ ನಿಜ ಗುರುಮೂರ್ತಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು