ನೀನೇ ಗತಿಯೆನಗೆ - (ಲಕ್ಷ್ಮೀಸ್ತ್ರೋತ್ರ)

ನೀನೇ ಗತಿಯೆನಗೆ - (ಲಕ್ಷ್ಮೀಸ್ತ್ರೋತ್ರ)

(ರಾಗ ಗಮನಕ್ರಿಯೆ ಮಟ್ಟೆತಾಳ ) ನೀನೇ ಗತಿಯೆನಗೆ ವನಜ ನೇತ್ರೆ ||ಪ|| ಕೈಲಾಸ ಎಂಬೋದು ಕಣ್ಣಿಲಿ ಕಾಣೆ ಮೈಲುವಾಹನಪಿತ ಎತ್ತ ಪೋದನೊ ಕಾಣೆ || ಸತ್ಯಲೋಕವೆಂಬೋದು ಮಿಥ್ಯವಾಗಿತು ಕಾಣೆ ಎತ್ತ ಪೋದನು ಬ್ರಹ್ಮ ಏನು ಮಾಡಲಿ ಅಮ್ಮ || ಸರಸಿಜನಾಭನು ಶರಧಿಯೊಳ್ ಮುಳುಗಿದ ಪುರಂದರವಿಠಲನ ಕರುಣಕ್ಕೆ ಪಾತ್ರಳೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು