ನೀನಿರುಳೆಲ್ಲಿದ್ದೆ

ನೀನಿರುಳೆಲ್ಲಿದ್ದೆ

(ರಾಗ ಶ್ರೀ ಅಟ ತಾಳ ) ನೀನಿರುಳೆಲ್ಲಿದ್ದೆ ಹೇಳಯ್ಯ ಶ್ರೀನಿವಾಸ ಮೂರುತಿ ಗೋವಳರಾಯ ||ಪ|| ಪಾಲ ಸಾಗರದಿ ಹಾವಿನ ಮೇಲೆ ತಳಿ- ರಾಲದೆಲೆಯ ಮೇಲೆ ಯಶೋದೆಯ ತೋಳಿನ ಮೇಲೆ ಗೋಪಿಯರಲಿ, ಕ್ರತು ಶಾಲೆಯೊಳರಸಿ ನೋಡಿದರಿಲ್ಲ || ಕಡೆವಲ್ಲಿ ತುರುವಿಂಡುಗಳಲ್ಲಿ, ಸತ್ಯ ನುಡಿವಲ್ಲಿ ಎಣೆಗಾಣಿಸದಲ್ಲಿ ಮಡದಿ ರುಕ್ಮಿಣಿ ಜಾಂಬವತಿಯರಲ್ಲಿ ನಿ- ನ್ನಡಿಗಡಿಗರಸಿ ನೋಡಿದರಿಲ್ಲ || ಏಕಾದಶಿಯ ಜಾಗರದಲ್ಲಿ, ಪುಣ್ಯ- ಲೋಕಪಾವನ ಭಾಗವತರಲ್ಲಿ ವ್ಯಾಖ್ಯಾನ ತೆಗೆದು ನೋಡಿದರಿಲ್ಲ. ಜಗ- ದೇಕ ಪುರಂದರ ವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು