ನಿನ್ನ ನಾಮವಿದ್ದರೆ ಸಾಕೋ

ನಿನ್ನ ನಾಮವಿದ್ದರೆ ಸಾಕೋ

(ರಾಗ ಪಂತುವರಾಳಿ/ಕಾಮವರ್ಧನಿ ಅಟ ತಾಳ ) ನಿನ್ನ ನಾಮವಿದ್ದರೆ ಸಾಕೋ ||ಪ|| ಮುನಿದರೆ ಮುನಿ ನಿನ್ನಾಣೆ ಶ್ರೀ ರಾಮ ||ಅ|| ಹೊದ್ದಿದ ಪಾಪವನೆಲ್ಲ ಛಿನ್ನಚಿದ್ರವ ಮಾಡಿ ಖಂಡಿಸಿ ಬಿಡುವ ಎದ್ದರೆ ಸಂಕಟ ಬರುವ ಎನ್ನ ಮುದ್ದಿಸಿ ಮುಂದಕೆ ಮುಕ್ತಿಯ ಕೊಡುವ || ಸಾರೆ ಸಂಗಡ ಬರುವ ಎನ್ನ ಸೇರಿದ ಪಾಪವ ಕೋಪದಿ ತರಿವ ಝಾಡಿಸಿ ಕರ್ಮವ ಕಳೆವ ಎನ್ನ ಕೂಡಿಕೊಂಡು ವೈಕುಂಠಕ್ಕೆ ನಡೆವ || ಪರಮಾನಂದನೀವ ನಿನ್ನ ಸ್ಮರಣೆಯೆಂಬುದು ಎನ್ನ ಜೀವಕ್ಕೆ ಜೀವ ವರ ಕೊಡುವುದೊಂದು ಭಾವ ಈ ಪರಿ ಪುಸಿಯಲ್ಲ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು