ನಿನ್ನನೆ ನಂಬಿದೆ ನೀರಜನಯನ

ನಿನ್ನನೆ ನಂಬಿದೆ ನೀರಜನಯನ

(ರಾಗ ಆನಂದಭೈರವಿ. ಏಕ ತಾಳ ) ನಿನ್ನನೆ ನಂಬಿದೆ ನೀರಜನಯನ ಎನ್ನ ಪಾಲಿಸೊ ಇಂದಿರಾರಮಣ || ಗೌತಮ ಮುನಿಯ ಶಾಪದಲಿ ಅಹಲ್ಯೆಯು ಪಥದೊಳು ಶಿಲೆಯಾಗಿ ಮಲಗಿರಲು ಪತಿತಪಾವನ ನಿನ್ನ ಪಾದ ಸೋಕೆ ಸತಿಯಾಗೆ ಅತಿಶಯದಿ ಭಕುತರನು ಕಾಯಿದನೆಂಬೋದು ಕೇಳಿ || ಬಲವಂತ ಉತ್ತಾನಪಾದರಾಯನಣುಗನ ಮಲತಾಯಿ ನೂಕಲಡವಿಯೊಳಗೆ ಜಲಜಾಕ್ಷ ನಿನ್ನನು ಕುರಿತು ತಪವಿ- ರಲಾಗೆ ನೀನವಗೆ ಧ್ರುವಪಟ್ಟ ಕಟ್ಟಿದ್ದು ಕೇಳಿ || ಸುರನರಲೋಕದಿ ಪುಣ್ಯದ ಜನರನ್ನು ಪೊರೆಯಬೇಕೆಂದು ವೈಕುಂಠದಿಂದ ಸಿರಿಸಹಿತದಿ ಬಂದು ಶೇಷಾಚಲದಿ ನಿಂದು ಕರುಣಿ ಶ್ರೀಪುರಂದರವಿಠಲನೆಂಬುದ ಕೇಳಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು