ನಾ ನಿನ್ನ ಧ್ಯಾನದೊಳಿರಲು

ನಾ ನಿನ್ನ ಧ್ಯಾನದೊಳಿರಲು

(ರಾಗ ಕಾನಡ ರೂಪಕ ತಾಳ ) ನಾ ನಿನ್ನ ಧ್ಯಾನದೊಳಿರಲು ಮಿಕ್ಕ ಹೀನ ಮಾನವರೇನು ಮಾಡಬಲ್ಲರೊ ರಂಗ ||ಪ|| ಮಚ್ಚರಿಸುವರೆಲ್ಲ ಕೂಡಿ ಮಾಡುವುದೇನು ಅಚ್ಯುತ ನಿನದೊಂದು ದಯೆಯಿರಲು ವಾತ್ಸಲ್ಯ ಬಿಡದಿರು ನಿನ್ನ ನಂಬಿದೆ ದೇವ ಕಿಚ್ಚಿಗೆ ಇರುವೆ ಮುತ್ತುವುದೆ ಕೇಳಲೊ ರಂಗ || ಧೂಳಿಲಿ ಕುದುರೆ ವೈಯಾರದಿ ಕುಣಿಯಲು ಧೂಳು ರವಿಯ ಮೇಲೆ ಮುಸುಕುವುದೆ ತಾಳಿದವರಿಗೆ ವಿರುದ್ಧ ಲೋಕದಲುಂತೆ ಗಾಳಿಗೆ ಗಿರಿಯು ಅಲ್ಲಾಡಬಲ್ಲುದೆ ರಂಗ || ಕನ್ನಡಿಯೊಳಗಿನ ಗಂಟು ಕಂಡು ಕಳ್ಳ ಕನ್ನವಿಕ್ಕಲವನ ವಶವಹುದೆ ನಿನ್ನ ನಂಬಲು ಮುದ್ದು ಪುರಂಡರವಿಟ್ಠಲ ಚಿನ್ನಕೆ ಪುಟವನಿಟ್ಟಂತೆ ಅಹುದು ರಂಗ ||
ದಾಸ ಸಾಹಿತ್ಯ ಪ್ರಕಾರ
ಬರೆದವರು