ನಾನೇಕೆ ಪರದೇಶಿ ನಾನೇಕೆ ಬಡವನು

ನಾನೇಕೆ ಪರದೇಶಿ ನಾನೇಕೆ ಬಡವನು

(ರಾಗ ಕೇದಾರಗೌಳ ಛಾಪು ತಾಳ ) ನಾನೇಕೆ ಪರದೇಶಿ ನಾನೇಕೆ ಬಡವನು ||ಪ|| ಘನ್ನ ಮಾನಾಭಿಮಾನಕ್ಕೆ ವಿಠಲ ನೀನಿರಲಾಗಿ ||ಅ|| ಮೂರುಲೋಕದ ಅರಸು ಶ್ರೀಹರಿ ಎನ್ನ ತಂದೆ ವಾರಿಜಮುಖಿ ಲಕುಮಿ ಎನ್ನ ತಾಯಿ ಮೂರು ಅವತಾರದ ಹನುಮಂತ ಎನ್ನ ಗುರು ಹರಿಭಕ್ತಜನರೆಲ್ಲ ಬಂಧುಬಳಗಿರಲಾಗಿ || ಇಪ್ಪತ್ತನಾಲ್ಕು ಅಕ್ಷರವೆಂಬೊ ಹಳೆ ನಾಣ್ಯ ಮುಪ್ಪದಿಂದಲಿ ಕುಳಿತು ಉಣಲುಬಹುದು ತಪ್ಪದೆ ನವವಿಧ ಭಕ್ತಿಜ್ಞಾನಗಳಿಂದ ಮುಪ್ಪು ಇಲ್ಲದ ಭಾಗ್ಯ ಎನ್ನಲ್ಲಿ ಇರಲಾಗಿ || ನಿನ್ನ ನಂಬಿದವರ ಒಲಿವೆಯೋ ಶ್ರೀಹರಿ ನಿನಗಿಂತ ಇನ್ನು ಒಲಿವರು ಇಲ್ಲವೊ ಪನ್ನಗಶಯನ ಶ್ರೀಪುರಂದರವಿಠಲನ ಚರಣ ಅನುಮಾನವಿಲ್ಲದೆ ಎನ್ನ ಶಿರದಲ್ಲಿರಲಾಗಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು