ಧರ್ಮ ಏಕೋ ಸಹಾಯಃ

ಧರ್ಮ ಏಕೋ ಸಹಾಯಃ

( ರಾಗ ಕಾಪಿ. ಅಟ ತಾಳ) ಧರ್ಮ ಏಕೋ ಸಹಾಯಃ ||ಪ|| ಪರಬ್ರಹ್ಮ ಮೂರುತಿಯ ಪಾದವ ಭಜಿಪ ಸುಜನರಿಗೆ ||ಅ|| ಹರಿಭಕುತಿಯನು ಮಾಳ್ವ ಪರಮ ಭಾಗವತರಿಗೆ ಕರೆದು ಭೂಸುರರಿಗನ್ನವನಿತ್ತಗೆ ಪರ ಸತಿಯರನು ಕಂಡು ಮನವೆಳಸದಿದ್ದವಗೆ ಪರರುಪದ್ರವ ಬಿಡಿಸಿ ಪೊರೆವ ಸುಜನರಿಗೆಲ್ಲ || ನಿತ್ಯ ನೇಮವ ಬಿಡದೆ ಸತ್ಯದಲಿ ನಡೆದವಗೆ ವ್ಯರ್ಥ್ತವಾಗಿ ಹೊತ್ತು ಕಳೆಯದವಗೆ ಚಿತ್ತಶುದ್ದಿಯಲಿ ಪರವಸ್ತು ಹರಿಯನು ತನ್ನ ಹೃತ್ಕಮಲಮಧ್ಯದಲಿ ಇಟ್ಟು ಭಜಿಪರಿಗೆಲ್ಲ || ಮಾತೃಪಿತೃಗಳನ್ನ ಪ್ರಿಯದಲ್ಲಿ ಪೊರೆದವಗೆ ಯಾತ್ರೆಗಳ ಮಾಳ್ಪ ಪುಣ್ಯಾತ್ಮಗೆ ಧಾತ್ರಿಯೊಳು ಪುರಂದರವಿಠಲನ ನಾಮವನ್ನು ಕೀರ್ತನೆ ಮಾಡಿ ಲೋಲ್ಟಾಡುತಿಹ ಸುಜನರಿಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು