ಧನ್ಯ ನಾನಾದೆ ವಿಠಲನ ಕಂಡು

( ರಾಗ - ಧನ್ಯಾಸಿ(ಸೋಹನಿ) ಆದಿತಾಳ(ತೀನ್ ತಾಳ) )

ಧನ್ಯ ನಾನಾದೆ ವಿಠಲನ ಕಂಡು ಧನ್ಯ ನಾನಾದೆ
ಧನ್ಯ ನಾನಾದೆ ಕಾಮನ ಪಿತ ಲಾವಣ್ಯಮೂರುತಿಯ ಕಣ್ಣಲಿ ನೋಡಿ ||ಪ||

ದೇವವರೇಣ್ಯ ಸದಾವಿನೋದಿ ವೃಂ-
ದಾವನ ಸಂಚಾರ ಗೋಪನ ಕಂಡು ||೧||

ಮಂಗಳಾಂಗ ಕಾಳಿಂಗಮರ್ದನ ಮಾ-
ತಂಗ ವರವಶದ ರಂಗನ ಕಂಡು ||೨||

ಹಾಟಕಾಂಬರ ಕಿರೀಟ ಸಾರಥಿ
ತಾಟಕಾರಿ ವೈರಾಟನ ಕಂಡು ||೩||

ಚಿಂತಿತ ಫಲದ ಕೃತಾಂತನಾತ್ಮಜಾ-
ದ್ಯಂತರಹಿತ ನಿಶ್ಚಿಂತನ ಕಂಡು ||೪||

ಮಾತುಳಾಂತಕ ವಿಧಾತಪಿತ ಜಗ-
ನ್ನಾಥವಿಠಲ ವಿಖ್ಯಾತನ ಕಂಡು ||೫||