ಕೆಂಡಕೆ ಜಿರಳೆ ಮುತ್ತುವುದುಂಟೆ

ಕೆಂಡಕೆ ಜಿರಳೆ ಮುತ್ತುವುದುಂಟೆ

(ರಾಗ ಕಾಂಭೋಜ ಝಂಪೆತಾಳ) ಕೆಂಡಕೆ ಜಿರಳೆ ಮುತ್ತುವುದುಂಟೆ ಪಾಂಡುರಂಗನ ದಾಸರಿಗೆ ಭಯವುಂಟೆ ||ಪ|| ಆನೆ ಸಿಂಹನ ಕೂಡೆ ಸ್ನೇಹ ಬೆಳೆಸುವುದುಂಟೆ ಶ್ವಾನ ಹೆಬ್ಬುಲಿ ಕೂಡೆ ಸರಸವುಂಟೆ ಏನೆಂಬೆ ಮನದಲ್ಲಿ ಸರ್ವದಾ ನಿನ್ನಂಘ್ರಿ ಧ್ಯಾನದೊಳಿದ್ದವಗೆ ದಾರಿದ್ರ್ಯವುಂಟೆ || ಕತ್ತಲೆಯೊಳು ರವಿ ಕವಿದು ಮುಚ್ಚುವುದುಂಟೆ ಹುತ್ತ ಸರ್ಪನ ಕಪ್ಪೆ ನುಂಗುವುದುಂಟೆ ಅತ್ತಿತ್ತ ತೊಲಗದೆ ಚಿತ್ತಜನಯ್ಯನ ಚಿತ್ತದೊಳಿಟ್ಟವಗೆ ಚಿಂತೆಯುಂಟೆ || ಮಾರುತನ ಗುದ್ದಿ ಅಂಗ ನೋಯಿಸುವುದುಂಟೆ ಹೇಮಗಿರಿಯ ವಜ್ರ ಸೀಳೋದುಂಟೆ ಸ್ವಾಮಿ ಶ್ರೀ ಪುರಂದರವಿಠಲರಾಯನ ನಾಮಧಾರಿಗಳಿಗೆ ನರಕವುಂಟೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು