ಕೂಸು ಕಂಡೆವಮ್ಮ

ಕೂಸು ಕಂಡೆವಮ್ಮ

(ರಾಗ ಪಂತುವರಾಳಿ , ಅಟತಾಳ) ಕೂಸು ಕಂಡೆವಮ್ಮ , ಅಮ್ಮ ನಿಮ್ಮ ಕೂಸು ಕಂಡೆವಮ್ಮ ||ಪ|| ಕಾಸಿಗೆ ವೀಸವ ಬಡ್ಡಿ ಗಳಿಸಿಕೊಂಡು ಶೇಷಗಿರಿಯ ಮೇಲೆ ವಾಸವಾಗಿದ್ದನೆ || ವಂಚಿಸಿ ಬಲೆಯೊಳ್ ಪ್ರಪಂಚವೆಲ್ಲ ಸೆಳೆದು ಕಂಚಿ ಪಟ್ಟಣದಿ ಬಲ್ ಮಿಂಚಾಗಿದ್ದನೆ || ಗುಡ್ಡ ಬೆರಳೊಳೆತ್ತಿ ದೊಡ್ಡಿ ಗೋವ್ಗಳ ಕಾಯ್ದು ಒಡ್ಡಿ ಜಗನ್ನಾಥ ಗಿಡ್ಡಾಗಿದ್ದನೆ || ದುಡುಕುಮಾಡಿ ಹಾಲು ಮಡಕೆಗಳ ಒಡೆದು ಹಡಗನೇರಿ ಬಂದು ಉಡುಪಿಲಿ ಇದ್ದನೆ || ಮಂಗಳರೇಖೆ ಪಾದಂಗಳುಳ್ಳ ನಿಮ್ಮ ರಂಗ ಪುರಂದರವಿಠಲ ಶ್ರೀಕೃಷ್ಣನೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು