ಕೂಳಿಗೆ ಬಿದ್ದಿರುವ ಬೋಳಿಗೆ

ಕೂಳಿಗೆ ಬಿದ್ದಿರುವ ಬೋಳಿಗೆ

(ರಾಗ ಸೌರಾಷ್ಟ್ರ , ಅಟತಾಳ) ಕೂಳಿಗೆ ಬಿದ್ದಿರುವ ಬೋಳಿಗೆ ನಿನಗಿಷ್ಟು ಗಯ್ಯಾಳಿತನವೇತಕೆ ||ಪ|| ಆಚಾರ ನೋಡಿದರೆ ಅಲ್ಲೇನು ಹರಡಿಲ್ಲ ಮೋಚಿ ಸಣ್ಣ ಮೊಗ ಮುಸುಕುತಿದ್ದ ವಾಚಾಮಗೋಚರ ಹರಟೆಯ ಹರಟುತ ನೀಚ ಮುಂಡೆಗೆ ನೇಮನಿಷ್ಠೆಗಳೆ || ಲಕ್ಷ ಬತ್ತಿಯ ಮಾಡಿ ಲಕ್ಷ ನಮಸ್ಕರಿಸಿ ಲಕ್ಷ್ಮೀಪತಿಭಕ್ತಿ ಹುಸಿಯಿಂದಲಿ ಅ- ಪೇಕ್ಷೆ ಪರಪುರುಷಗೆ ಪ್ರೀತಿಯಲಿ ರಾತ್ರಿಯೊಳು ಭಿಕ್ಷವ ನೀಡಿ ಬಿಗಿದಪ್ಪುವಳಯ್ಯ || ಉಂಡು ತಿಂದು ಮೂಳಿ ಗಂಡುಗತ್ತರಿಯೆಂದು ಕಂಡವರ್ಹೇಳುತಿರುವಾಗ ಇಷ್ಟು ದಂಡಿಸುವ ನಮ್ಮ ಶ್ರೀ ಪುರಂದರವಿಠಲ ಮಂಡೆ ಬೋಳಾದರೆ ಮನ ಬೋಳಾಯಿತೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು