ಕೂಗದೆ ಉಸಿರಿಕ್ಕದೆ ನೀವು

ಕೂಗದೆ ಉಸಿರಿಕ್ಕದೆ ನೀವು

( ರಾಗ ಪಂತುವರಾಳಿ ಅಟತಾಳ) ಕೂಗದೆ ಉಸಿರಿಕ್ಕದೆ, ನೀವು , ಬೇಗ ಬೇಗನೆ ಬನ್ನಿ , ರಂಗ ಮನೆಯ ಪೊಕ್ಕ ||ಪ|| ಸೂರಿ ಕೆಳಗೆ ನಿಂದಾರಿಸಿ ತನ್ನ ವಾರಿಗೆಯ ಮಕ್ಕಳನು ಕೂಡಿಸಿ ಹಾರಿ ಗೋಡೆಯ ಧುಮುಕಿ ಒಳಗೆ ಪೊಕ್ಕು ಸೂರೆಗೊಳ್ಳುತಾನೆ ಸುಮ್ಮನೆ ಬನ್ನಿ || ಹೆಜ್ಜೆಗಳಿವೆ ನಮ್ಮ ಮನೆಯಲ್ಲಿ , ಕಾಲು- ಗೆಜ್ಜೆಯ ಧ್ವನಿ ಕೇಳಿ ಬರುತಲಿದೆ ನಿರ್ಜನರ ಕಂಡು ರಂಗ ಮನೆಯ ಪೊಕ್ಕು ಮಜ್ಜಿಗೆಲೋಕುಳಿಯಾಡುವನಮ್ಮ || ಹಾಲು ಚೆಲ್ಲಿ ಹಳ್ಳ ಮುಂದೆ ಹರಿದಿದೆ ಮೇಲೆ ಮೊಸರುಕೆನೆ ಚೆಲ್ಲಾಡಿದೆ ಲೀಲೆ ಹೀಗೆ ಆಡುತಲೈದನೆ ಬಾಳ ಚೋರ ಗುರು ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು