ಕಂದನ ಕಾಣಿರೇನೆ ಗೋಪಿಯ ಕಂದ

ಕಂದನ ಕಾಣಿರೇನೆ ಗೋಪಿಯ ಕಂದ

ರಾಗ ಸಾವೇರಿ/ಚಾಪು ತಾಳ ಕಂದನ ಕಾಣಿರೇನೆ ಗೋಪಿಯ ಕಂದ || ಪಲ್ಲವಿ || ಕಂದನಲ್ಲವೆ ಎನ್ನ ಕುಂದಣದರಗಿಣಿಯೆ || ಅನು ಪಲ್ಲವಿ || ಉಂಗುರನಿಟ್ಟಿದ್ದೆ ಉಡಿದಾರ ಕಟ್ಟಿದ್ದೆ ಬಂಗಾರದ ಟೊಪ್ಪಿಗೆ ತಲೆಯ ಮೇಲಿಟ್ಟ || ೧ || ರೊಟ್ಟಿಯ ಸುಟ್ಟಿದ್ದೆ ತುಪ್ಪವ ಕಾಸಿದ್ದೆ ಇಷ್ಟು ಹೊತ್ತು ಹೋಯಿತು ಉಣಲಿಲ್ಲ || ೨ || ಕಾಶಿಗೆ ಹೋಗಿ ನಾ ಕೂಸಿನ ಪಡೆದೆ ಪುರಂದರವಿಠಲನ ದಾಸರಿಗೆ ತಕ್ಕ ಮಗುವೇ ನಮ್ಮಮ್ಮ || ೩ || ~~~ * ~~~ [ಇದು ವಿಷ್ಣುಪರವಾದ ಪದ. ಬಹುಶಃ ಕಾಶಿಯಲ್ಲಿ ಬಿಂಧುಮಾಧವನ ದರ್ಶನವಾದಾಗ ರಚಿಸಿದ್ದು. ಜನರ ಸಂದಣಿಯಲ್ಲಿ ಅವರ ಮಗುವೇ ಒಂದು ದಿಟವಾಅಗಿ ಕಾಣೆಯಾಗಿದ್ದಿತೋ ಏನೋ. ಅದು ಮತ್ತೆ ದೊರೆತಾಗ ಹೊರಬಂದ ಪದವೂ ಇದ್ದೀತು.] [ಪುರಂದರ ಸಾಹಿತ್ಯ ದರ್ಶನ - ಭಾಗ ೧]
ದಾಸ ಸಾಹಿತ್ಯ ಪ್ರಕಾರ
ಬರೆದವರು