ಎಲ್ಲಿ ಬೆಣ್ಣೆಯ ಬಚ್ಚಿಡಲಿ ನಾ

ಎಲ್ಲಿ ಬೆಣ್ಣೆಯ ಬಚ್ಚಿಡಲಿ ನಾ

( ರಾಗ ಕೇದಾರಗೌಳ. ಅಟ ತಾಳ) ಎಲ್ಲಿ ಬೆಣ್ಣೆಯ ಬಚ್ಚಿಡಲಿ ನಾ ಕಳ್ಳ ಕೃಷ್ಣನ ಹಾವಳಿ ಘನವಾಯಿತು ||ಪ|| ನೆಲುವು ನಿಲುಕದೆಂದಿಡುವೆನೆ ಈ ಬೆಳಿಯಾಲಾಜಾಂಡ ವಾಡಿಯೊಳಿಲ್ಲ ತಿಳಿಯದೆ ಕೆಳದಲ್ಲಿರಿಸುವೆನೆ ಈ ಬೆಳಕುಗಳೆಲ್ಲ ಇವನ ಕಂಗಳಾಧಳಾ || ಎವೆ ಇಡದಲ್ಲಿ ಕಾದಿರುವೆನೆ ನೋಡೆ ದಿವಿಜಗಳೆಲ್ಲ ಇವನ ಮಾಯ ಅವನೀಶ್ವರಗೆ ಮೊರೆಯಿಡುವೆ ಅಕ್ಕಾ ಅವನಿಟ್ಟ ಬಂಟರಿಂದ್ರಾದಿಗಳೆಲ್ಲರು || ಈಗಲೆ ಇನಿತು ಮಾಳ್ಪವನೆಂತೊ ಮುಂದೆ ಅಗಲಿಸುವಾಗ ತನುವನು ಕೂಗಿ ಹೇಳಲು ಮತ್ತೆ ಕೇಡಮ್ಮ , ಮುಂದೆ ಹೇಗೆ ಪುರಂದರವಿಠಲನಟ್ಟುಳಿಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು