ಎಲ್ಲಾರು ಮಾಡುವುದು ಹೊಟ್ಟೆಗಾಗಿ

ಎಲ್ಲಾರು ಮಾಡುವುದು ಹೊಟ್ಟೆಗಾಗಿ

( ರಾಗ ಹುಸೇನಿ. ಆದಿ ತಾಳ) ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ||ಪ || ಸಿರಿ ವಲ್ಲಭನ ಭಜಿಸುವುದು ಮುಕ್ತಿಗಾಗಿ ||ಅ || ಪಲ್ಲಕ್ಕಿಯ ಹೊರುವುದು ಹೊಟ್ಟೆಗಾಗಿ, ದೊಡ್ಡ ಮಲ್ಲರೊಡನಾಡುವುದು ಹೊಟ್ಟೆಗಾಗಿ ಸುಳ್ಳಾಗಿ ಪೊಗಳುವುದು ಹೊಟ್ಟೆಗಾಗಿ, ಸಿರಿ ವಲ್ಲಭನ ಧ್ಯಾನವು ಮುಕ್ತಿಗಾಗಿ || ದೊರೆತನ ಮಾಡುವುದು ಹೊಟ್ಟೆಗಾಗಿ, ಕರಿ ತುರಗವೇರುವುದು ಹೊಟ್ಟೆಗಾಗಿ ದುರಿತವ ಮಾಡುವುದು ಹೊಟ್ಟೆಗಾಗಿ, ಸಿರಿ ಹರಿಯ ಭಜಿಸುವುದು ಮುಕ್ತಿಗಾಗಿ || ಬೆಟ್ಟವ ಹೊರುವುದು ಹೊಟ್ಟೆಗಾಗಿ ಗಟ್ಯಾಗಿ ಕೂಗುವುದು ಹೊಟ್ಟೆಗಾಗಿ ದಿಟ್ಟವಾಗಿ ನಮ್ಮ ಶ್ರೀಪುರಂದರ- ವಿಟ್ಠಲನ್ನ ಧ್ಯಾನವು ಮುಕ್ತಿಗಾಗಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು