ಎಂಥಾ ಚೆಲುವಗೆ ಮಗಳನು ಕೊಟ್ಟನು

ಎಂಥಾ ಚೆಲುವಗೆ ಮಗಳನು ಕೊಟ್ಟನು

ಎಂಥಾ ಚೆಲುವಗೆ ಮಗಳನು ಕೊಟ್ಟನು ಗಿರಿರಾಜನು ನೋಡಮ್ಮಮ್ಮ || ಪಲ್ಲವಿ || ಕಂತುಹರ ಶಿವ ಚೆಲುವನೆನ್ನುತ ಮೆಚ್ಚಿದನು ನೋಡಮ್ಮಮ್ಮಾ || ಅನು ಪಲ್ಲವಿ || ಮೋರೆ ಐದು ಮೂರು ಕಣ್ಣು ವಿಪರೀತವ ನೋಡಮ್ಮಮ್ಮಾ ಕೊರಳೊಳು ರುಂಡಮಾಲೆಯ ಧರಿಸಿದ ಉರಗಭೂಷಣನ ನೋಡಮ್ಮಮ್ಮಾ || ೧ || ತಲೆಯೊಂಬೋದು ನೋಡಿದರೆ ಜಡೆ ಹೊಳೆಯುತಿದೆ ನೋಡಮ್ಮಮ್ಮಾ ಹಲವು ಕಾಲದ ತಪಸಿ ರುದ್ರನ ಮೈ ಬೂದಿಯ ನೋಡಮ್ಮಮ್ಮಾ || ೨ || ಭೂತ ಪ್ರೇತ ಪಿಶಾಚಿಗಳೆಲ್ಲ ಪರಿವಾರವು ನೋಡಮ್ಮಮ್ಮಾ ಈತನ ನಾಮವು ಒಂದೇ ಮಂಗಳ ಮುಪ್ಪುರಹರನ ನೋಡಮ್ಮಮ್ಮಾ || ೩ || ಮನೆಯೆಂಬುವುದು ಸ್ಮಶಾನವು ನೋಡೆ ಗಜ ಚರ್ಮಾಂಬರವಮ್ಮಮ್ಮಾ ಹಣವೊಂದಾದರು ಕೈಯೊಳಗಿಲ್ಲ ಕಪ್ಪರವನು ನೋಡಮ್ಮಮ್ಮಾ || ೪ || ನಂದಿವಾಹನ ನೀಲಕಂಠನ ನಿರ್ಗುಣನ ನೋಡಮ್ಮಮ್ಮಾ ಇಂದಿರೆರಮಣ ಶ್ರೀ ಪುರಂದರವಿಠಲನ ಪೊಂದಿದವನ ನೋಡಮ್ಮಮ್ಮಾ || ೫ ||
ದಾಸ ಸಾಹಿತ್ಯ ಪ್ರಕಾರ
ಬರೆದವರು