ಇಲ್ಲೆ ಕುಳಿತಿದ್ದ ಭೂತವು

ಇಲ್ಲೆ ಕುಳಿತಿದ್ದ ಭೂತವು

(ರಾಗ ಸುರುಟಿ ಆದಿತಾಳ) ಇಲ್ಲೆ ಕುಳಿತಿದ್ದ ಭೂತವು ||ಪ|| ಒಂದು , ಹಲ್ಲಿ ನುಂಗಿತು ಹದಿನಾಲ್ಕು ಲೋಕವ ||ಅ|| ಸೂಳೆಯ ಮನೆಯಲ್ಲಿ ಅದೊಂದು ಕೋಳಿ ಕೋಳಿಯ ನಾಲಿಗೆ ಏಳುತಾಳು ಉದ್ದ ಕೋಳಿ ನುಂಗಿತು ಏಳು ಕಾಳಿಂಗನಾಗನ್ನ ಮೇಲೆದ್ದು ಬೇಡಿತು ಸಿಂಹದ ಮರಿಯು || ಕಾನನದ ಒಳಗೊಂದು ಅದೊಂದು ಕೋಣ ಕೋಣನ ಕೊರಳಿಗೆ ಮುನ್ನೂರು ಭಾವಿ ಕೋಣ ನೀರಿಗೆ ಹೋಗಿ ಕ್ನೋಣಿ ಕಪಿಯ ಕೊಂದು ದೊಡ್ಡ ಟೊಣ್ಣನ ಮನೆಯೊಳಗೌತಣವಯ್ಯ || ವೃಕ್ಷದ ಮೇಲೊಂದು ಸೂಕ್ಷ್ಮದ ಪಕ್ಷಿ ಪಕ್ಷಿಭಕ್ಷಣವಾದ ಅಮೃತದ ಹಣ್ಣು ಪಕ್ಷಿ ನೋಡಲು ಬಂದ ರಾಕ್ಷಸ ಬ್ರಾಹ್ಮಣ ಶಿಕ್ಷೆಯ ಮಾಡಿದ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು