ಅಂಜನಾ ಸುಕುಮಾರನೆ | ಹರಿದಾಸ ಸಾಹಿತ್ಯ ಸಂಪದ Skip to main content

ಅಂಜನಾ ಸುಕುಮಾರನೆ

ಅಂಜನಾ ಸುಕುಮಾರನೆ ಭವ- ||ಪ||

ದಂಜಿಕೆ ಬಿಡಿಸು ಬೇಗ ಸಂಜೀವರಾಯನೆ ||ಅ.ಪ||



ವಾಯುಪುತ್ರಾ ವಜ್ರಗಾತುರ

ನೋಯುವೆ ನಾ ಸಂಸಾರದೊಳ್

ಕೈಯ ಪಿಡಿದೆತ್ತುವರಾರೈ ||೧||



ಗುರುವರೇಣ್ಯ ತವ ಪಾದಪಂ

ಕರುಹಯುಗವಾಶ್ರಯಿಪರ

ನೆರಲಿನೊಳಗಿಟ್ಟುಯನ್ನನು ||೨||



ಕ್ಷೇಮದಾತನೇ ಶ್ರೀ ಗುರು

ರಾಮವಿಠಲ ಕಿಂಕರ

ಭೂಮಿಜಾಶೋಕನಾಶನ ||೩||





--------ಬಾಗೇಪಲ್ಲಿ ಸುಬ್ರಹ್ಮಣ್ಯದಾಸರು





 

ದಾಸ ಸಾಹಿತ್ಯ ಪ್ರಕಾರ: 
ಬರೆದವರು: