Skip to main content

ಅಂಬುಜಾಕ್ಷಿ ಸ್ತಂಭದಿಹನ್ಯಾರೇ , ಸಾರೇ

ಅಂಬುಜಾಕ್ಷಿ ಸ್ತಂಭದಿಹನ್ಯಾರೇ , ಸಾರೇ ||ಪ||
ನಂಬಿ ಭಜಿಸುವ ಮನದ ಭಕುತರ
ಮನದ ಹಂಬಲ ನೀಡುವರೆ, ನೀರೇ ||ಅ.ಪ||

ಸುರರೊಡೆಯನೋಲ್ ಪರಿಪರಿಯಲೈಶ್ವರ್ಯದಿಂ ರಾಜಿಸುವರ್ಯಾರೇ
ಹರಿಕಥಾಮೃತ ಗ್ರಂಥ ವಿರಚಿಸಿ ಧರಣಿಸುರರುದ್ಧರಿಸಿದವರೆ ||೧||

ಫುಲ್ಲಲೋಚನೆ ಬಲ್ಲೆಯಾ ಇವರಿಲ್ಲಿರುವ ಕಾರಣವಿದೇನೆ
ಫುಲ್ಲನಾಭನ ಹುಡುಕತಲೀ ಪ್ರಹ್ಲಾದನನುಜ ಸಹ್ಲಾದರಿವರೆ ||೨||

ಜಲಜ ತುಲಸಿಮಣಿ ಸುಮಾಲಿಕೆ  ಗಳದಿ ಧರಿಸಿಹನ್ಯಾರೆ , ನೀರೇ
ಕಲಿಯುಗದಿ ಕಮಲಾಪತಿ ವಿಠಲನ ಒಲಿಸಿದಿಳೆಯೊಳಗೆ ಮೆರೆವರೆ ||೩||

--------------

ದಾಸ ಸಾಹಿತ್ಯ ಪ್ರಕಾರ: 
ಬರೆದವರು: