ಒಂದಲ್ಲ ಎರಡಲ್ಲ ನೊಂದ ಜೀವಕೆ ದುಃಖ

ಒಂದಲ್ಲ ಎರಡಲ್ಲ ನೊಂದ ಜೀವಕೆ ದುಃಖ

( ರಾಗ ಕೇದಾರಗೌಳ ತ್ರಿಪುಟತಾಳ) ಒಂದಲ್ಲ ಎರಡಲ್ಲ ನೊಂದ ಜೀವಕೆ ದುಃಖ ಒಂದೊಂದು ಕ್ಷಣಕೆ ಅನಂತ ದುಃಖ ||ಪ|| ಬಸಿರಿನೊಳಗೆ ದುಃಖ ಶಿಶುತನದಲಿ ದುಃಖ ಎಸೆವ ಕೌಮಾರ ಯೌವನದ ದುಃಖ ವಶವಲ್ಲದ ದುಃಖ ವಾರ್ಧಿಕ್ಯದ ದುಃಖ ಸತಿ ಸುತ ಮಿತ್ರರು ಕಾಡುವ ದುಃಖ || ಅಷ್ಟ ಭೋಗದ ದುಃಖ ಆರರಿಗಳ ದುಃಖ ಕಷ್ಟ ದಾರಿದ್ರ್ಯ ಕಾಡುವ ದುಃಖ ಮೃಷ್ಟಾನ್ನವು ಇಲ್ಲದೆ ಮಿಡುಕುವ ದುಃಖ ದುಷ್ಟರಿಂದ ನುಡಿ ಕೇಳುವ ದುಃಖ || ತನಗಿಂತಲಧಿಕರನನುಸರಿಸುವ ದುಃಖ ತನಗಿಂತ ಬಡವರು ಕಾಡುವ ದುಃಖ ತನ್ನ ಸರಿಯರ ಮಾತು ಕೇಳುವ ದುಃಖ ತನ್ನವರು ತನಗಿನ್ನು ಆಗದ ದುಃಖ || ಗತಿ ನೀನೇಯೆಂದು ಹಂಗಿನ ಕೂಳಿನ ದುಃಖ ಪ್ರತಿ ಉಪಕಾರ ಮಾಡುವ ದುಃಖ ಶ್ರುತಿ ವಚನಗಳಿಲ್ಲದೆ ಇಹದಲಿ ದುಃಖ ಅತಿ ಸ್ನೇಹದವರನ್ನು ಬಿಡುವ ದುಃಖ || ಇಂದಿಹ ಸುಖ ದುಃಖ ದೇಹ ಗೇಹವೆ ಸಾಕು ಶಂಕರನೊಡೆಯ ಶ್ರೀ ಹರಿಯೆ ಕಾಯೊ ಸಂತತ ಸಿರಿಪುರಂದರವಿಠಲ ಲಕ್ಷ್ಮೀ- ಕಾಂತನ ನೆನೆದು ನಿಶ್ಚಿಂತನಾಗು ಮನವೆ||
ದಾಸ ಸಾಹಿತ್ಯ ಪ್ರಕಾರ
ಬರೆದವರು