ಒಂಭತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ
( ರಾಗ ಮಾಯಾಮಾಳವಗೌಳ ಆದಿತಾಳ)
ಒಂಭತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ
ನಂಬಿಕಿಲ್ಲದ ಸಂಸಾರ ಮಾಡಿದೆನೆ ಸೂವಿಯಾ ಬೀಬಿ ||ಪ||
ತನುವೆಂಬ ಕಲ್ಲಿನೊಳು ಮನವೆಂಬೊ ಧಾನ್ಯವ ತುಂಬಿ
ವನವನದು ನವಬೇಳೆ ಬೀಸಿದನೆ ||
ಅಷ್ಟ ಕರ್ತೃಗಳೆಂಬೊ ಅಷ್ಟ ನವಧಾನ್ಯವ ತಂದು
ಕುಟ್ಟಿ ಕಟ್ಟಿ ಕಜ್ಜಾಯ ಕರಿದೆನೆ ||
ಅಷ್ಟ ಕರ್ತೃಗಳೆಂಬೊ ಕಾಲವನ್ನುಳುಹಿ ನಾನು
ನಿಷ್ಠೆಯಿಂದಲಿ ಅನ್ನವ ಬಾಗಿದೆನೆ ||
ಅಷ್ಟರೊಳಗೆನ್ನ ಗಂಡ ಬಂದು ಆಡುವ ಮಡಿಕೆಯ ಒಡೆದು
ಮುಟ್ಟಿ ಮುರಿದು ಮೂಲೆಗೆ ಹಾಕಿದನೆ ||
ಉಡುವ ಸೀರೆಯ ಸೆಳೆದು ಗಿಡದ ತೊಪ್ಪಲ ಸುತ್ತಿ
ತಿರುಗಿ ಬಾರದ್ಹಾಂಗೆ ಮಾಡಿದನೆ ||
ಮಾಡಿದೆ ಒಗತನವ ನಂಬಿಕಿಲ್ಲದ ಸಂಸಾರವ ನೆಚ್ಚಿ
ಕೂಡಿದೆ ಪುರಂದರವಿಠಲನ್ನ ದಾಸರ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments