ಒಳ್ಳೇದೊಳ್ಳೇದು

ಒಳ್ಳೇದೊಳ್ಳೇದು

( ರಾಗ ಕಾಪಿ ಆದಿತಾಳ) ಒಳ್ಳೇದೊಳ್ಳೇದು ಎಲ್ಲ ಸ್ಥಳವ ಬಿಟ್ಟು ಇಲ್ಲಿ ಅಡಗಿದ್ಯಾ ಬಲ್ಲಿದತನವೆ ||ಪ|| ಬಿಡೆ ಬಿಡನೊ ಎನ್ನ ಒಡೆಯ ತಿರುಮಲ ನಿನ್ನ ಉಡಿಯ ಪೀತಾಂಬರ ಪಿಡಿದು ಸಲ್ಲಿಸಿಕೊಂಬೆ || ಎರವು ಮರವು ಮಾಡಿ ತಿರುಗಿಸಿ ಎನ್ನ ಕೊರಳಿಗೆ ನಿನ್ನ ಚರಣ ಕಟ್ಟಿಕೊಂಬೆ || ಅತ್ತೆಯ ಮಕ್ಕಳಿಗೆ ತೆತ್ತಿಗ ನೀನಾಗಿ ವಿತ್ತವಿತ್ತದ ರಾಶಿ ತಂದಿತ್ತ ಪರಿಯಲಿ || ಅತ್ತ ಇತ್ತಲಿ ನೋಡಿನ್ನೆತ್ತ ಪೋಗಲಿ ನಿನ್ನ ಚಿತ್ತದಲಿ ಹುತ್ತಗಟ್ಟಿಕೊಂಬೆ || ಇರುಳು ಹಗಲು ಬಿಡದೆ ಗುರು ಪುರಂದರಗೊಲಿದೆ ಅರಿದು ಏನು ಇಷ್ಟು ಪುರಂದರವಿಠಲನೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು