ವಹವ್ವಾರೆ ಮೆಣಸಿನಕಾಯಿ

ವಹವ್ವಾರೆ ಮೆಣಸಿನಕಾಯಿ

( ರಾಗ ನಾದನಾಮಕ್ರಿಯೆ ಏಕತಾಳ) ವಹವ್ವಾರೆ ಮೆಣಸಿನಕಾಯಿ ಒಣರೊಟ್ಟಿಗೆ ತಂದೆನೊ ತಾಯಿ ||ಪ|| ಹುಟ್ಟುತಲಿ ಹಸಿರಾಗುತ ಕಂಡೆ ನಟ್ಟ ನಡುವೆ ಕೆಂಪಾಗುತ ಕಂಡೆ ಕಟ್ಟೆರಾಯನ ಬಹು ರುಚಿಯೆಂಬೆ || ಒಂದೆರಡರೆದರೆ ಬಹು ರುಚಿಯೆಂಬೆ ಮೇಲೆರಡರೆದರೆ ಬಹು ಖಾರೆಂಬೆ ಅದು ಎರಡರೆದರೆ ಅತಿ ಖಾರೆಂಬ || ಬಡವರಿಗೆಲ್ಲ ನಿನ್ನಾಧಾರ ಅಡಿಗೆ ಊಟಕ್ಕೆ ನಿನ್ನ ಸಾರ ಬಾಯಲಿ ಕಡೆದರೆ ಬೆಂಕಿಯ ಖಾರ ಪುರಂದರ ವಿಠಲನ ನೆನೆಯೊದು ಭಾರ ||
ದಾಸ ಸಾಹಿತ್ಯ ಪ್ರಕಾರ
ಬರೆದವರು