ಯಶೋದೆ ನಿನ್ನ ಕಂದಗೆ ಏಸು ರೂಪವೆ

ಯಶೋದೆ ನಿನ್ನ ಕಂದಗೆ ಏಸು ರೂಪವೆ

( ರಾಗ ಧನಶ್ರೀ ಆದಿತಾಳ) ಯಶೋದೆ ನಿನ್ನ ಕಂದಗೆ ಏಸು ರೂಪವೆ ||ಪ|| ಶಿಶುವಲ್ಲ ನಿನ್ನ ಮಗ ಕೃಷ್ಣ ಜಗತ್ಪತಿಯೆ ||ಅ|| ಹಸುಗಳ ಕರೆವಲ್ಲಿ ಹಲವು ರೂಪ ತೋರುವ ಬಿಸಿಯ ಹಾಲಿಡುವಲ್ಲಿ ಬೆನ್ನ ಹಿಂದೆ ಇರುವ ಮೊಸರ ಕಡೆಯುವಲ್ಲಿ ಮುಂದೆ ತಾ ನಿಂತಿರುವ ಹಸನಾಗಿ ಮೋಸ ಮಾಡಿ ಬೆಣ್ಣೆಯ ಮೆಲುವ || ಒಬ್ಬರ ಮನೆಯಲಿ ಮಲಗಿ ತಾನಿರುವ ಒಬ್ಬರ ಮನೆಯಲಿ ಬೆಣ್ಣೆ ಕದ್ದು ಮೆಲುವ ಒಬ್ಬರ ಮನೆಯಲಿ ರತಿಕ್ರೀಡೆಯಾಡುತಿರುವ ಒಬ್ಬರ ಮನೆಯಲಿ ಪುಟಚೆಂಡನಾಡುವ || ಹಿಂದೆ ತಾ ನಿಂತಿರುವ ಮುಂದೆ ಹೋಗುತ್ತಿರುವ ಇಂದುಮುಖಿಯರ ಕೂಡೆ ಸರಸವಾಡುವ ಬಂದು ನೋಡೆ ಯಶೋದೆ ಬಣ್ಣದ ಮಾತಲ್ಲ ನಂದಗೋಪನ ಕಂದ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು