ವ್ಯರ್ಥವಾಯಿತೆ ಜನುಮ

ವ್ಯರ್ಥವಾಯಿತೆ ಜನುಮ

( ರಾಗ ಕಾಮವರ್ಧನಿ ರೂಪಕತಾಳ) ವ್ಯರ್ಥವಾಯಿತೆ ಜನುಮ ವ್ಯರ್ಥವಾಯಿತೆ ||ಪ|| ಅತ್ತಲಿಲ್ಲ ಇತ್ತಲಿಲ್ಲ ಅರ್ಥಮಾನ ಹಾನಿಯಾಗಿ ||ಅ|| ಕುರುಡನರಿವೆಯನ್ನು ಹೊಸೆಯೆ ಕರುವು ಮೆದ್ದ ತೆರದಂತೆ ಪರರ ಕಾಡಿ ತಂದ ಧನವು ಪುತ್ರ ಮಿತ್ರರಿಗಿತ್ತು || ತರುಣಿಯರಿಗೆ ಹಿತವಿಲ್ಲ ತರಳರಿಗೆ ಮರುಕವಿಲ್ಲ ಬರೆದು ಬರೆದು ಒರಲಿ ಒರಲಿ ಅರಸುವರಿಯದ ಬಿಟ್ಟಿಮಾಡಿ || ಊರು ಊರು ತಿರುಗಿ ತಿರುಗಿ ದಾರಿಯನ್ನು ನಡೆದು ನಡೆದು ಶರೀರವು ಸೊರಗಿ ಕರಗಿ ಘೋರ ನರಕ ಸಾಧನೆ ಮಾಡಿ || ನಾರಿ ಮಗು ಮುದ್ದಾಡಿದರೆ ಜಾರೆ ನೋಡಿ ನಗುವಂತೆ ಘೋರ ಸಂಸಾರ ನೆಚ್ಚಿ ನೀರು ಕಡೆದು ನೋಡಿದಂತೆ || ನರಜನ್ಮದಲ್ಲಿ ಬಂದು ಧರೆಯ ಮೇಲೆ ಪುಟ್ಟಿ ಬೆಳೆದು ವರದ ಪುರಂದರವಿಠಲನ ಸ್ಮರಣೆಯನ್ನು ಮಾಡದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು