ಧನದಾಸೆ ದೈನ್ಯ ಪಡಿಸುತಿದೆ

ಧನದಾಸೆ ದೈನ್ಯ ಪಡಿಸುತಿದೆ

ಧನದಾಸೆ ದೈನ್ಯ ಪಡಿಸುತಿದೆ ವನಿತೆಯರಾಸೆ ಓಡಾಡಿಸುತಿದೆ ಮನದಾಸೆ ಮಂತ್ರವ ಕೆಡಿಸುತಿದೆ ಮನೆವಾರ್ತೆಯಾಸೆ ಮನವ ಬಾಧಿಸುತಿದೆ ಇನಿತರಾಸೆಯ ಬಿಡಿಸಿ ನಿನ್ನ ಚರಣಂಗಳ ನೆನೆವಂತೆ ಮಾಡೊ ಪುರಂದರವಿಠಲ _________________________ ಗುರಿಯನೆಚ್ಚವನೆ ಬಿಲ್ಲಾಳು ಹರಿಯ ಭಜಿಸಲು ಅರಿಯದವ ಮಾಸಾಳು ಹರಿಯೆಂದು ಓದದ ಓದೆಲ್ಲಾ ಹಾಳು ಪುರಂದರವಿಠಲ ಪಾರ್ಥನ ಮನೆಯಾಳು ____________________________ ಒಬ್ಬರ ಭಂಟನಾಗಿ ಕಾಲ ಕಳೆವುದಕ್ಕಿಂತ ನಿರ್ಬಂಧವಿಲ್ಲದೆ ತನ್ನಿಚ್ಚೆಯೊಳಿದ್ದು ಲಭ್ಯವಾದೊಂದು ತಾರಕ ಸಾಕು ಸಾಕು ಅಬ್ಬರವೊಲ್ಲೆನಯ್ಯ ಅಷ್ಟರಲ್ಲೆ ಸಂತುಷ್ಟನಿಹೆನು ಕರುಣಾಕರ ಪುರಂದರವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು