ವೈದ್ಯನ ನಾನರಿಯೆ

ವೈದ್ಯನ ನಾನರಿಯೆ

( ರಾಗ ಸುರುಟಿ ಅಟತಾಳ) ವೈದ್ಯನ ನಾನರಿಯೆ, ಭವರೋಗವೈದ್ಯ ನೀನೇ ಹರಿಯೇ ||ಪ|| ಭವರೋಗಕೆ ಬಂಧು ನೀನೆ ||ಅ|| ಕೃಷ್ಣ ನೀ ಕೈ ಪಿಡಿದು ಕಪಟದಿ ಉಷ್ಣವಾಯು ಜರಿದು ವಿಷ್ಣುಭಕ್ತಿ ನಿನ್ನ ಸೇವೆ ಎನಗಿತ್ತು ಉತ್ಕೃಷ್ಟನ ಮಾಡೆನ್ನ ಕಷ್ಟ ಪಡಿಸದೆ || ಹರಿ ನಿಮ್ಮ ಶರಣವೆಂಬ ರಸದಲಿ ಚರಣಧ್ಯಾನವಿತ್ತು ಗುರುತರ ಮಾತ್ರೆಗಳೆನಗೆ ಕೊಟ್ಟು ದುರಿತ ಪಾರುಗೆಯ್ವ ಬಂಧು ನೀನಲ್ಲದೆ || ನಿನ್ನ ದಾಸ ನಾನು ದುರಿತಗಳೆನ್ನ ಕಾಡುವುದೇನು ಉಚಿತವಯ್ಯ ಘನ್ನ ಶ್ರೀಪುರಂದರವಿಠಲರಾಯನೆ ಎನ್ನ ದುರಿತವ ಹರಿಸುವನಲ್ಲದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು