ನೋಡು ನೋಡು ನೋಡು

ನೋಡು ನೋಡು ನೋಡು

(ರಾಗ ಕಾಂಭೋಜ ಆದಿತಾಳ ) ನೋಡು ನೋಡು ನೋಡು ಕಂಡ್ಯ ಹೀಗೆ ಮಾಡುತಾನೆ ಗಾಡಿಗಾರ ನಿನ್ನ ಮಗ ಕೃಷ್ಣರಾಯ ಕಾಣೆ ||ಪ|| ಸೆರಗ ಪಿಡಿದು ಬಂದು ನಮ್ಮ ಸ್ತನವ ಪಿಡಿವುತಾನೆ ಮರೆಗೆ ನಿಂತು ಕರದಿ ಸನ್ನೆ ತಿರುಗಿ ಮಾಡುತಾನೆ ಎರಳಯಂತೆ ಎರಗಿ ಬಂದು ಮೇಲೆ ಬೀಳುತಾನೆ, ಈ ತರಳಗೆ ಬುದ್ಧಿಯ ಪೇಳಿ ನಿಲ್ಲಿಸುವರ ಕಾಣೆ || ಕಂಡ ಕಂಡ ಬಳಿಯ ನಿಂತು ಕಣ್ಣ ಮುಚ್ಚುತಾನೆ ಗಂಡರಾಳಿದಂದದಲಿ ಆಳೇನೆನ್ನುತಾನೆ ಪುಂಡತನ ಬೇಡವೆಂದರೆ ಹಟದಿ ಬರುತಾನೆ, ಈ ಲಂಡಗೆ ಬುದ್ಧಿಯ ಪೇಳಿ ನಿಲ್ಲಿಸುವರ ಕಾಣೆ || ಗೋವರ್ಧನಗಿರಿಯನೆತ್ತಿ ಬಂದೆನೆನ್ನುತಾನೆ ಆವು ತುರು ಕರುಗಳನೆಲ್ಲ ತಂದೆನೆನ್ನುತಾನೆ ಭಾವೆಯರ ಕಾಣುತಲೆ ಮೀರಿ ಬರುತಾನೆ ನಾವು ಪೇಳಿದರು ಮಾತ ಕೇಳಲೊಲ್ಲ ಜಾಣೆ || ಹಾಲು ಮೊಸರು ಬೆಣ್ಣೆಗಳ ಹಾಳು ಮಾಡುತಾನೆ ಕೋಲ ಕೊಂಡು ಬಂದರೆ ಬಿಗಿದಪ್ಪಿಕೊಳ್ಳುತಾನೆ ನೀಲಮೇಘಶ್ಯಾಮನೆಂದರೆ ಅಹುದು ಎನ್ನುತಾನೆ, ಈ ಲೀಲೆಗಳೆಲ್ಲ ನಮಗೆ ತಾಳದಿನ್ನು ಕಾಣೆ || ನಾರಿಯರ ಬೆನ್ನ ಹತ್ತಿ ಮೇಲೆ ಬರುತಾನೆ ಯಾರು ನೀನೆಂದರೆ ರುಕ್ಮಿಣಿಯರಸನೆನ್ನುತಾನೆ ಕ್ಷೀರಸಾಗರವಾಸ ಎಂದರೆ ಅಹುದು ಎನ್ನುತಾನೆ ವಾರಿಜಾಕ್ಷ ಪುರಂದರವಿಠಲ ತಾ ಕಾಣೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು