ನಿನ್ನ ನಾಮವ ನೆನೆದು

ನಿನ್ನ ನಾಮವ ನೆನೆದು

(ರಾಗ ನೀಲಾಂಬರಿ ಏಕತಾಳ ) ನಿನ್ನ ನಾಮವ ನೆನೆದು ಪುನೀತನಾದೆನೊ ಮನ್ನಿಸಿ ಸಲಹಯ್ಯ ಮದನಜನಕ ಕಲ್ಯಾಣ ಕರಿವರದ ||ಪ|| ಮಹಾರಣ್ಯ ಸರಸ್ಸಿನಲ್ಲಿ ಮಕರಿ ಬಾಯೊಳಗೆ ಸಿಲ್ಕಿಕೊಂಡು ಮಹಾಸಾಮಜನ ಕರಪಿಡಿದೆಳೆವಾಗ ಸಹಾಯ ಒಬ್ಬರ ಕಾಣೆ ಗಹನದಲಿ ಅಹೋ ವರದಾ ಎಂದು ಕೂಗಿದಾ ಕ್ಷಣದಲಿ ಸ್ನೇಹದಿಂದಲಿ ನೀನಂಜಬೇಡೆಂದು ಮುಂದೆ ನಿಂದು ಕಾಯಿದ ದೊರೆಯೆ || ನಿಜಮತಿಯಾಗಿ ಪಾಪಗಳ ಮಾಡಿ ನಿರಯಾಣ ಸಮಯದಲಿ ಹೇ ಸುಜನರಕ್ಷಕನೆಂದರಿಯದೆ ತನ್ನ ತ- ನುಜ ನಾರಗನೆಂದಾ ಕ್ಷಣದಲ್ಲಿ ನೀ- ನಂಜ ಬೇಡೆಂದು ಮುಂದೆ ನಿಂದು ಕಾಯಿದ ದೊರೆಯೆ || ರಜಸ್ವಲೆಯಾದ ದ್ರೌಪದಿಯ ತಂದು ಪಾಪಿ ದುರ್ಯೋದನನು ಧ- ರ್ಮಜ ಮೊದಲಾದವರ ಮುಂದೆ ಮಾನಗೆಡಿಸುವ ಸಮಯದಲಿ ವಿಜಯಸಾರಥಿ ಅಹೋ ಪುರಂದರವಿಠಲ ಎಂತೆಂದು ಕೂಗಿದಾ ಕ್ಷಣದಲ್ಲಿ ಅಂಜಬೇಡೆಂದು ಅಕ್ಷಯವೆನಿಸಿ ನೀ ಮುಂದೆ ನಿಂದು ಕಾಯಿದ ದೊರೆಯೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು