ಶ್ರೀಮಧ್ವ ರಮಣ ನಿನ್ನ ದ್ವೈತಮಹಿಮೆ

ಶ್ರೀಮಧ್ವ ರಮಣ ನಿನ್ನ ದ್ವೈತಮಹಿಮೆ

( ರಾಗ ಸೌರಾಷ್ಟ್ರ ಏಕತಾಳ) ಶ್ರೀಮಧ್ವ ರಮಣ ನಿನ್ನ ದ್ವೈತಮಹಿಮೆ ಎಂಥಾದ್ದೋ ಸಮಸ್ತ ಕೋಟಿ ವೇದಂಗಳು ಕೂಡಿ ತುತಿಸಲೊಮ್ಮೆ ಸಮರ್ಥಂಗಳಾಗಲಿಲ್ಲವೋ ||ಪ|| ಯಂ ಕಾಮಯೇ ತಂತಮುಗ್ರಂ ಕೃಣೋಮಿ ಎಂಬಂಥಾ ಶ್ರುತಿ ನಿಕರ ಪ್ರತಿಪಾದ್ಯಳಾದಳೋ ಸುಖಾಬ್ದಿಯಲ್ಲಿ ನಿರತ ಮುಳುಗಿಪ್ಪಳೋ ರಮೆ || ನಖದಲ್ಲಿ ನಾನಾ ವಿಧಾನೇಕ ವಿಷಯಂಗಳನ್ನು ಏಕ ಮನದಿಂದ ನೋಡುತ ಲಯಾಬ್ಧಿಯಲ್ಲಿ ನಗುತ ಕುಳಿದಿಪ್ಪಳೋ ರಮೆ || ಒಂದೇ ಕಾಲದಲ್ಲಿ ನಿನ್ನ ಒಂದೇ ರೋಮಕೂಪದಲ್ಲಿ ಅನಂತಕೋಟಿ ಬ್ರಹ್ಮಾಂಡಗಳು ಮಾಧವನೊಬ್ಬ ಆನಂದದಿಂದ ಧರಿಸಿಪ್ಪ || ಅವನಾಗ ಅವತಾರ ಅನಂತಾನಂತ ರೂಪಂಗಳು ದೇವಕೀತನಯಗುಂಟಯ್ಯ ಕ್ಷೀರಾಬ್ಧಿಯಲ್ಲಿ ದೇವೇಶ ಸ್ತ್ರೀರೂಪ ಧರಿಸಿಪ್ಪ || ಐವತ್ತು ಕೋಟಿ ಯೋಜನ ವಿಸ್ತೀರ್ಣ ವಟಪತ್ರದಲ್ಲಿ ಏಳು ಕೋಟಿಯೋಜನ ಮಾನದಿ ಬಾಲಕನೊಬ್ಬ ಬಾಯಿಲುಂಗುಟನಿಕ್ಕಿ ಮಲಗಿರುವ || ಅಣೋರಣೀಯಾನ್ ಮಹತೋ ಮಹೀಯಾನೆಂಬೋ ನಾನಾ ಶ್ರುತಿಯಿಂದ ಸನ್ನುತ ಸದ್ಗುಣ ಸಂಪೂರ್ಣನೂ ವನಜಾಕ್ಷ ನಿನ್ನ ಸಿರಿ ನಿನ್ನ ಮಹಿಮೆ ಅರಿಯಳೋ || ಅನಾಥರಕ್ಷಕನೆಂದು ನಿನ್ನ ನಂಬಿದಂಥ ಎನ್ನ ಮನ್ನಿಸಿ ರಕ್ಷಿಸೋ ಶ್ರೀಶ ಲಕ್ಷ್ಮೀಶ ಅನಾಥಬಂಧೋ ದೀನಬಂಧೋ ದಯಾನಿಧಿಯೇ || ದಶಶತಸಾಸಿರದ ರೂಪನಾದ ವಾಸುದೇವ ಕುಸುಮನಾಭ ಶೇಷಾದ್ರೀಶನ ಪುರಂದರವಿಠಲ ನಿನ್ನ ದಾಸನೆಂದು ದಯ ಮಾಡಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು