ಸತ್ಯವೆಂಬುದೆ ಸ್ನಾನ ಉಪವಾಸ ಜಪ ನೇಮ

ಸತ್ಯವೆಂಬುದೆ ಸ್ನಾನ ಉಪವಾಸ ಜಪ ನೇಮ

( ರಾಗ ಕಲ್ಯಾಣಿ ಆದಿತಾಳ) ಸತ್ಯವೆಂಬುದೆ ಸ್ನಾನ ಉಪವಾಸ ಜಪ ನೇಮ ಅ- ಸತ್ಯದಲಿ ಮಾಡುವ ಕರ್ಮ ವ್ಯರ್ಥ || ಪ|| ಅಪ್ಪಳಿಸಿ ಪರರ ಒಡವೆಗಳ ತಂದುಂಡು ತಾ- ನೊಪ್ಪದಿಂದುಪವಾಸ ವ್ರತವ ಮಾಡಿ ತಪ್ಪದಲೆ ಸ್ವರ್ಗವನು ಸೂರೆಗೊಂಬುವನೆಂಬೆ ಸರ್ಪಗಳು ಮಾಡಿದ ಅಪರಾಧವೇನಯ್ಯ || ಬಿಡದೆ ಮದಮತ್ಸರಾಹಂಕಾರದಲಿ ಮುಳುಗಿ ಒಡನೆ ಬೆರಳುಗಳೆಣಿಸಿ ಮೌನದಿಂದ ತಡೆಯದಲೆ ಪರಲೋಕ ಸೂರೆಗೊಂಬುವೆನೆಂಬೆ ಬಡ ಬಕನು ಮಾಡಿದ ಅಪರಾಧವೇನಯ್ಯ || ಪರಸತಿಯು ಪರಧನವು ಪರನಿಂದೆ ಪರಹಿಂಸೆ ಪರಮಪಾತಕದ ಕಾರಣವೆಂದು ತಿಳಿದು ಧರೆಗಧಿಕ ಪುರಂದರವಿಟ್ಠಲನ ಚರಣವನು ನೆರೆ ಭಜಿಸಿ ಸುಖಿಯಾಗಿ ಬಾಳೆಲವೊ ಮನುಜ ||
ದಾಸ ಸಾಹಿತ್ಯ ಪ್ರಕಾರ
ಬರೆದವರು