ತಾರಿಸೋ ಶ್ರೀಹರಿ

ತಾರಿಸೋ ಶ್ರೀಹರಿ

( ರಾಗ ಭೈರವಿ ಆದಿ ತಾಳ) ತಾರಿಸೋ ಶ್ರೀಹರಿ ನಮ್ಮ ತಾರಿಸೋ ||ಪ|| ತಾರಿಸೋ ಭವ ನಿವಾರಿಸೋ ನಿನ್ನ ಪಾದ ತೋರಿಸೋ ವೈಕುಂಠವಾಸ ರಂಗಯ್ಯ || ಪಾಪ ವಿನಾಶವ ಮಾಡುವೆ ನೀ ತಾಪಸಿಯರನು ಸಲಹುವೆ ವ್ಯಾಪಿಸಿ ನಿನ್ನ ನೆನೆವರ ಕಾಯ್ವ ಶ್ರೀಪಾಂಡುರಂಗ ಪರಮಾತ್ಮ ಮುಕುಂದ || ಹಿರಣ್ಯಕಶಿಪುವಿನ ಸೀಳಿದೆ ಅವನ ಕರುಳು ಕೊರಳೊಳು ಹಾಕಿದೆ ದುರುಳ ರೂಪದ ದೈತ್ಯರ ಕೊಂದು ಕರುಣದಿಂದಲಿ ಕಂದಗೊಲಿದ ಗೋವಿಂದ || ಅಸುವ ಪೂತನಿಯ ಹೀರಿದೆ ನೀ ಶಶಿಮುಖಿಯಭಿಮಾನ ಕಾಯಿದೆ ಶಿಶುವಾಗಿ ಬಾಲ ಲೀಲೆ ತೋರಿದೆ ಕುಸುಮನಾಭ ಶ್ರೀ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು