ತಾಂಬೂಲವ ಕೊಳ್ಳೋ

ತಾಂಬೂಲವ ಕೊಳ್ಳೋ

( ರಾಗ ಆನಂದಭೈರವಿ ಆದಿತಾಳ) ತಾಂಬೂಲವ ಕೊಳ್ಳೋ ತಮನ ಮರ್ದನನೆ, ಕಮಲ ವದನನನೆ ||ಪ|| ಅಂಬುಜಾಕ್ಷಿ ಮೋದದಿಂ ಮಡಚಿ ಕೊಡುತಾಳೆ ||ಅ|| ಸಂಪಿಗೆಣ್ಣೆ ಅತ್ತರು ಚಂದನದೆಣ್ಣೆ ಈ ಪರಿಪರಿವಿಧ ಪರಿಮಳದ ಎಣ್ಣೆ ಕೆಂಪುಕೇಸರಿ ಗಂಧಕಸ್ತೂರಿಯು ಚಂಪಕ ಮೊದಲಾದ ಪುಷ್ಪವ ಮುಡಿಯೊ || ಚಿಕ್ಕಣಿ ಅಡಿಗೆ ಕೇದಿಗೆ ಕಾಚ್ ಕೂಡಿದ ಏ- ಲಕ್ಕಿ ಜಾಯಿಕಾಯಿ ಲವಂಗ ಜಾಯಪತ್ರೆಯು ಮೌಕ್ತಿಕದ ಸುಣ್ಣ ಕರ್ಪೂರ ಬೆರಸಿ ತಾ ರುಕ್ಮಿಣಿದೇವಿಯು ಸಮರ್ಪಿಸುತಾಳೆ || ಮಂಚವ ಹಾಕಿದೆ ಮಲ್ಲಿಗೆಹೂವ ತರಿಸಿದೆ ಮುಂಚೆ ಬಂದು ಮಲಗಯ್ಯ ಮಿಂಚುತಲಿ ಚಂಚಲಾಕ್ಷಿಯು ನಿನ್ನ ಇದಿರು ನೋಡುತಾಳೆ ಪಂಚಬಾಣನಯ್ಯ ಶ್ರೀಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು