ತಾತ್ತತ ಧಿಮಿತ ಧಿಮಿಕಿ ಎನುತ
( ರಾಗ ತೋಡಿ ಅಟತಾಳ)
ತಾತ್ತತ ಧಿಮಿತ ಧಿಮಿಕಿ ಎನುತ ಹರಿಯಾಡಿದನೆ ||ಪ||
ಚಿತ್ತಜಪಿತನುತ್ತಮ ಮುತ್ತಿನ ಗೊತ್ತುಗಳ್ ಕುತ್ತಿಯೊಳಗೆತ್ತ್ಯಾಡುತ ||ಅ||
ಹಾರ ಪದಕ ಕೇಯೂರ ಕಿರೀಟವು ಧೀರ ಬಾಹುಪುರಿಯದು
ವೀರ ಹೊಳೆಯುತಿರೆ ಮಾರಜನಕ ಸುಕುಮಾರ ಸಾರಗುಣಸಾಂದ್ರ ಮಹಿಮಹರಿ ||
ಮಂದಗಮನಯೆರು ಬೃಂದಬೃಂದದಲಿ ಚಂದ ನೋಡುತಿರೆ
ಆನಂದಗೋಪನ ಕಂದ ಮುಕುಂದ ನಿತ್ಯಾನಂದ ||
ಕಂಕಣ ವಂಕಿಯು ಕಿಂಕಿಣಿ ರವಗಳು ಶಂಖ ಚಕ್ರ ದಿವ್ಯ ಪಂಕಜಮಾಲೆಯು
ಶಂಖಗಳ ಶ್ರೀಪುರಂದರವಿಠಲ ವೇದಾಂತವೇದ್ಯ ಕೃಷ್ಣ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments