ನಾಯಿ ಬಂದದಪ್ಪ

ನಾಯಿ ಬಂದದಪ್ಪ

(ರಾಗ ಕೇದಾರಗೌಳ ಅಟ ತಾಳ ) ನಾಯಿ ಬಂದದಪ್ಪ ಅಣ್ಣ ಅತ್ತಲಾಗಿರಿ ||ಪ|| ನಾಯಿ ಅಂದರೆ ನಾಯಿಯಲ್ಲ ಮಾನವ ಜನ್ಮದ ಹೀನ ನಾಯಿ ||ಅ || ಕೊಟ್ಟ ಸಾಲವ ಕೊಡದ ನಾಯಿ, ಇಟ್ಟ ಭಾಷೆಯ ತಪ್ಪುವ ನಾಯಿ ಕಟ್ಟೆ ಮೇಲೆ ಕುಳಿತುಕೊಂಡು ಅಟ್ಟಹಾಸದಿ ಬಗುಳುವ ನಾಯಿ || ಕೊಟ್ಟು ಕುದಿಯುವೋ ಕೆಟ್ಟ ನಾಯಿ, ಇಟ್ಟ ಅನ್ನವ ಹಂಗಿಪ ನಾಯಿ ಪುಟ್ಟಿ ಮಾತೆ ಗರ್ಭದಲ್ಲಿ ಕೆಟ್ಟ ಕೃತ್ಯವ ಮಾಡುವ ನಾಯಿ || ಪಟ್ಟ ಸ್ತ್ರೀಯಳ ಬಿಟ್ಟಿಹ ನಾಯಿ, ಬಿಟ್ಟ ಸ್ತ್ರೀಯಳ ಆಳ್ವ ನಾಯಿ ದಿಟ್ಟ ಶ್ರೀ ಪುರಂದರ ವಿಠಲರಾಯನ ಮನ ಮುಟ್ಟಿ ಭಜಿಸದೆ ಹೋದ ನಾಯಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು