ಸೋಹಂ ಬ್ರಹ್ಮ ಎನಬೇಡ

ಸೋಹಂ ಬ್ರಹ್ಮ ಎನಬೇಡ

(ರಾಗ ಪಂತುವರಾಳಿ ಛಾಪು ತಾಳ) ಸೋಹಂ ಬ್ರಹ್ಮ ಎನಬೇಡ ಶುಂಠ ಪಂಡಿತ ಪಾಶಂಡ ಪಂಡಿತ ||ಪ|| ಎಲ ನಾಹಂ ಕರ್ತುಂ ನಾಹಂ ಭೋಕ್ತುಂ ಹೇಗೆ ಒಡೆಯನೋ ಮಾಯವಾದಿ ||ಅ|| ನೇಹ ನಾನಾಸ್ತಿ ಕಿಂಚನ ಎಂಬೊ ಶ್ರುತಿಗೆ ವೇದದ ಮಾತಿಗೆ ನಹಿ ನಹಿ ನಾನಾಸ್ತಿ ನಿಜ ಅರ್ಥ ಮಾಯವಾದಿ || ಮಂಡೂಕದ ಕೆರೆಯಂತೆ ಲಂಡಮತವ ಪಾ- ಷಂಡಮತವ ಹೆಂಡ ಕುಡಿದ ಬಡ್ಡಿಹಾಗೆ ಕೂಗಬೇಡೆಲೊ ಮಾಯವಾದಿ || ಅರಿಯದೆ ವರದಪುರಂದರವಿಠಲ ಕೃಷ್ಣರಾಯನ ಸ್ಮರಿಸದೆ ನೀ ಕೆಟ್ಟು ಹೋದೆಯಲ್ಲೊ ಮಾಯವಾದಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು