ವಂದಿಸಿದವರೆ ಧನ್ಯರು

ವಂದಿಸಿದವರೆ ಧನ್ಯರು

(ರಾಗ ರೇಗುಪ್ತಿ ಅಟತಾಳ ) ವಂದಿಸಿದವರೆ ಧನ್ಯರು ||ಪ|| ನಮ್ಮ ಇಂದಿರಾಪತಿಗಡ್ಡ ಬೀಳುತಲೊಮ್ಮೆ ||ಅ|| ಒಂದೊಂದು ಸ್ತೋತ್ರದಿ ಒಂದೊಂದು ಮಂತ್ರದಿ ಒಂದೊಂದು ನಾಮವ ನೆನೆಯುತ್ತ ಮಂದರೋದ್ಧರನ ನೀ ಕುಂದದೆ ಪೂಜಿಸಿ ವಂದಿಸುವ ಆನಂದದಿಂದ || ಬಿಟ್ಟು ಲಜ್ಜೆಯ ದೃಷ್ಟಿಸಿ ನೋಡುತ ವಿಟ್ಠಲ ವಿಟ್ಠಲ ಎನ್ನುತ ಮನ- ಮುಟ್ಟಿ ಮಾಡುವ ಭಕ್ತಿಸ್ತುತಿಯಿಂದ ಅಷ್ಟಾಂಗದಲಿ ವಂದನೆಯ ಮಾಡುತ || ಸಿರಿಲಕ್ಷ್ಮೀಪತಿ ಶರಣಾಗತರನ್ನು ಕರುಣಿಸೆಂದು ಕರಮುಗಿದು ಹರುಷಪುಳಕದಿಂದ ಮರೆತು ದೇಹವ ಪುರಂದರವಿಠಲರಾಯನ ದೇಹಕ್ಕೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು