ಯಂತ್ರ ದೊರಕಿತು

ಯಂತ್ರ ದೊರಕಿತು

(ರಾಗ ಶಂಕರಾಭರಣ ಛಾಪುತಾಳ) ಯಂತ್ರ ದೊರಕಿತು , ಯೋಗ ಯಂತ್ರ ಸಿಕ್ಕಿತು ||ಪ|| ಯಂತ್ರವಾಹಕ ನಾರಾಯಣನ ಅಂತರಂಗದಿ ನೆನೆಸುವಂಥ ||ಅ|| ಆಸೆಯಿಂದ ಮುಣುಗುವುದಲ್ಲ ವಾಸುದೇವನೆಂಬುವ ಮಹಾ ಶಾಶ್ವತವಾದ ದಿವ್ಯನಾಮ || ಹಾಸಬಹುದು ಹೊದ್ದಬಹುದು ಸೂಸಿ ಒಡಲ ತುಂಬಬಹುದು ಮೋಸಹೋಗಗೊಡುವುದಲ್ಲ ಶಾಶ್ವತವಾದ ದಿವ್ಯನಾಮ || ಓದಿ ಬರೆದು ಸ್ಮರಿಸಿದರೆ ಒಂದು ಕೋಟಿ ಜಪದ ಫಲವು ಸಾಧಿಸಲು ಕೈವಲ್ಯಪ್ರಾಪ್ತಿ ಪುರಂದರವಿಠಲನ ನಾಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು