ಮಂದರಧರನೆ ಮನೆ ಪೊಕ್ಕು

ಮಂದರಧರನೆ ಮನೆ ಪೊಕ್ಕು

(ರಾಗ ಕಾಂಭೋಜ ಆದಿತಾಳ ) ಮಂದರಧರನೆ ಮನೆ ಪೊಕ್ಕು ಬದುಕುವೆನೆ ಇಂದು ನಾಳೆ ನಾಡಿದ್ದೆಂಬ ಮಂದಮತಿಗಿನ್ನೇನೆಂಬೆ || ಹಿಂದೆ ಮುಂದೆ ಸುತ್ತಿ ಬಪ್ಪ ಮೃತ್ಯು ವಿಚಾರಿಸದೆ ತಂದು ತಂದು ಕೆಡಹುತಲಿದೆ ಭವಾಂಬುಧಿಯಲ್ಲಿ || ತಂದೆ ಇಂದು ಪರಿಯಂತ ಈ ಬೆಂದ ಮನದ ದೀಪ್ತಿಯ ತಂದೆ ಕರುಣಿಸೆಲೊ ಪುರಂದರವಿಠಲ ವಿಭುವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು