ನರಸಿಂಹನ ಪಾದಭಜನೆಯ ಮಾಡೋ
( ರಾಗ ಶಂಕರಾಭರಣ , ಆದಿತಾಳ)
ನರಸಿಂಹನ ಪಾದಭಜನೆಯ ಮಾಡೋ ||ಪ||
ನರಸಿಂಹನ ಪಾದಭಜನೆಯ ಮಾಡಲು
ದುರಿತ ಪರ್ವತವ ಖಂಡಿಸುವ ಕುಲಿಶದಂತೆ ||ಅ||
ತರಳನ ಮೊರೆ ಕೇಳಿ
ತ್ವರಿತದಲಿ ಬಂದು
ದುರುಳನ ಕರುಳ ತನ್ನ
ಕೊರಳಲ್ಲಿ ಧರಿಸಿದ ||
ಸುರರೆಲ್ಲ ನಡುಗಲು
ಸಿರಿದೇವಿ ಮೊರೆಯಿಡೆ
ವರ ಕಂಭದಿಂ ಬಂದ
ಸಿರಿ ನರಹರಿ ನಮ್ಮ ||
ಹರಿವಿರಿಂಚಾರಾದ್ಯರು
ಕರವೆತ್ತಿ ಮುಗಿಯಲು
ಪರಮಶಾಂತನಾದ ಶ್ರೀ
ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments