ಕಂಡವರಂತೆ ಎನ್ನನು ನೋಡಲಾಗದು
( ರಾಗ ತೋಡಿ ಛಾಪು ತಾಳ)
ಕಂಡವರಂತೆ ಎನ್ನನು ನೋಡಲಾಗದು
ಪುಂಡರೀಕದಳನಯನ ಪುರಾಣಪುರುಷೋತ್ತಮನೆ ||ಪ||
ಎಂಭತ್ತನಾಲ್ಕು ಲಕ್ಷಯೋನಿಗಳಿಂದ ಬಂದೆ , ನಾನು
ಕುಂಭೀಪಾಕನರಕದೊಳಗೆ ನಿಂದೆ ||
ಸಂಸಾರಸಾಗರದೊಳು ಸಿಕ್ಕು ಬಳಲಿದೆ , ಬಹು
ಹಿಂಸೆ ತಾಳಿದೆ ನೀನೆ ಎನಗೆ ಗತಿಯೆಂದು ||
ಅಂಜಬೇಡೆಂಬುವರಿಲ್ಲ ,ಆದರ ಮಾಡುವರಿಲ್ಲ , ನಮ್ಮ
ಅಂಜನಾಸುತಪ್ರಿಯ ಶ್ರೀಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments