ಅಕೋ ಹಾಗಿಹನೆ ಇಕೋ ಹೀಗಿಹನೆ

ಅಕೋ ಹಾಗಿಹನೆ ಇಕೋ ಹೀಗಿಹನೆ

(ರಾಗ ಹಿಂದೂಸ್ಥಾನಿ ದೇಶಿ ಆದಿತಾಳ ) ಅಕೋ ಹಾಗಿಹನೆ, ಇಕೋ ಹೀಗಿಹನೆ ಪರಬ್ರಹ್ಮ ಹೇಗಿಹನೆಂದರೆ ||ಪ|| ಕಾಲಿಲ್ಲದೆ ನಡೆಸುವ , ಕೈಯಿಲ್ಲದೆ ಹಿಡಿಸುವ ಹಲ್ಲಿಲ್ಲದೆ ತಿನಿಸುವ , ಹೊಟ್ಟಿಲ್ಲದೆ ಉಣಿಸುವ || ಕಣ್ಣಿಲ್ಲದೆ ಕಾಣಿಸುವ , ಕಿವಿಯಿಲ್ಲದೆ ಕೇಳಿಸುವ ಒಳಹೊರಗೆ ನುಡಿಸುವ , ಕಾಣಿಸಿಕೊಳ್ಳನು || ಶ್ವೇತದ್ವೀಪದಲಿ ನಿಂತಾ-ನಂತಾಸನದಿ ಮಲಗಿದ ವೈಕುಂಠದಲಿ ವಾಸ ಶ್ರೀ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು