ಕಲ್ಯಾಣಂ ತುಲಸಿ ಕಲ್ಯಾಣಂ

ಕಲ್ಯಾಣಂ ತುಲಸಿ ಕಲ್ಯಾಣಂ

(ರಾಗ ಸೌರಾಷ್ಟ್ರ , ಆದಿತಾಳ) ಕಲ್ಯಾಣಂ ತುಲಸಿ ಕಲ್ಯಾಣಂ ಕಲ್ಯಾಣವೇ ನಮ್ಮ ಕೃಷ್ಣ ಶ್ರೀತುಲಸಿಗೆ ಬಲ್ಲಿದ ಶ್ರೀವಾಸುದೇವನಿಗೆ ||ಪ|| ಅಂಗಳದೊಳಗೆಲ್ಲ ತುಲಸಿಯ ವನಮಾಡಿ ಶೃಂಗಾರವ ಮಾಡಿ ಶೀಘ್ರದಿಂದ ಕಂಗಳ ಪಾಪವ ಪರಿಹರಿಸುವ ಮುದ್ದು ರಂಗ ಬಂದಲ್ಲಿ ತಾ ನೆಲೆಸಿದನು || ಮಿಂದು ಮಡಿಯನುಟ್ಟು ಸಂದೇಹವ ಬಿಟ್ಟು ತಂದ ಶ್ರೀ ಗಂಧಾಕ್ಷತೆಗಳಿಂದ ಸಿಂಧುಶಯನನ ವೃಂದಾವನದಿ ಪೂಜಿಸೆ ಕುಂದದ ಭಾಗ್ಯವ ಕೊಡುತಿಹಳು || ಭಕ್ಷ್ಯ ಭೋಜ್ಯಂಗಳ ನೈವೇದ್ಯವನಿತ್ತು ಲಕ್ಷಬತ್ತಿಯ ದೀಪವ ಹಚ್ಚಿ ಅ- ಧೋಕ್ಷಜ ಸಹಿತ ವೃಂದಾವನವ ಪೂಜಿಸೆ ಸಾಕ್ಷಾತ್ ಮೋಕ್ಷವ ಕೊಡುತಿಹಳು || ಉತ್ಥಾನದ್ವಾದಶಿ ದಿವಸದಿಂದಲಿ ಕೃಷ್ಣ ಉತ್ತಮತುಲಸಿಗೆ ವಿವಾಹವ ಚಿತ್ತನಿರ್ಮಲರಾಗಿ ಮಾಡಿದವರಿಗೆ ಉತ್ತಮಗತಿ ಈವ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು