ಕಟ್ಟಬೇಕು ಕಾಟದೆಮ್ಮೆ

ಕಟ್ಟಬೇಕು ಕಾಟದೆಮ್ಮೆ

(ರಾಗ ಆಹೇರಿ ಅಟತಾಳ) ಕಟ್ಟಬೇಕು ಕಾಟದೆಮ್ಮೆ ಅದರ ಹಯನ ಎಷ್ಟಾದರು ಉಣಬೇಕು ||ಪ|| ಹಮ್ಮುಯೆಂಬೋದೆ ಎಮ್ಮೆ , ಗಮ್ಮುಯೆಂಬೋದೆ ಹಗ್ಗ ಹೆಮ್ಮುಯೆಂಬೋದೆ ಅದಕೆ ಧಮ್ಮ ಗುದ್ದಿ ಸುಮ್ಮನ ಮನದಿಂದ ಹಾಲ್ಕರೆದು ಪರ - ಬೊಮ್ಮನಿಗರ್ಪಿಸಬೇಕು ನಿತ್ಯದಿ || ಚಂಡಿತನವೆಂಬ ಹಿಂಡಿ ಇಡಬೇಕು ದಿಂಡತನವೆಂಬ ಪೆಂಡೆಮೇವು ಪುಂಡತನವೆಂಬೊ ಪಿಂಡಿ ರುಬ್ಬಿಡಬೇಕು ಪಾಂಡುರಂಗ ಗಿಂಡಿ ಒಳಗೆ ಹಿಂಡಿಕೊಬೇಕು || ಅಂತರಂಗದ ಒಳಗೆ ಭ್ರಾಂತಿ ಬಿಡಿಸುವ ಎಮ್ಮೆ ಅಂತುದಾರಿಗೂ ತಿಳಿಯದಿಂಥ ಎಮ್ಮೆ ಕಂತುಜನಕ ಸ್ವಾಮಿ ಪುರಂದರವಿಠಲನ ಸಂತರ ಮನೆಯೊಳಗೆ ಇಂಥೆಮ್ಮೆ ಇರಬೇಕು ||
ದಾಸ ಸಾಹಿತ್ಯ ಪ್ರಕಾರ
ಬರೆದವರು